ವೈವಿಧ್ಯತೆಯ ಬದುಕಿನತ್ತ ಸೆಳೆದ ಕೊರೋನ - ಲಾಕ್ ಡೌನ್


ವೈವಿಧ್ಯತೆಯ ಬದುಕಿನತ್ತ ಸೆಳೆದ ಕೊರೋನ - ಲಾಕ್ ಡೌನ್

ಪ್ರತಿನಿತ್ಯ , ಶಾಲಾ-ಕಾಲೇಜುಗಳಿಗೆ‌ ಹೋಗುವ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಸಿಕ್ಕಿದರೆ ಸಾಕು ಎನಿಸುತ್ತಿತ್ತು. ಬಾಲ್ಯದ ನೆನಪುಗಳನ್ನು ಬೇಸಿಗೆ ರಜೆಗಳಲ್ಲಿಯೇ ಮರು ನೆನಪಿಸಿಕೊಳ್ಳ ಬೇಕಿತ್ತು. ಅಮ್ಮ- ಅಜ್ಜಿ  ಮಾಡಿದ ಅಡುಗೆ, ಅಪ್ಪ ತಾತ ಮಾಡುತ್ತಿದ್ದ ಕೆಲಸಗಳಲ್ಲಿ ನಾವು ಕೂಡ ಭಾಗಿಯಾಗುತ್ತಿದ್ದೆವು. 

ಅಣ್ಣ , ಅಕ್ಕ, ತಮ್ಮ, ತಂಗಿ,  ಸ್ನೇಹಿತರೊಡನೆ ಆಟವಾಡುವಾಗ ಕಿತ್ತಾಡುತ್ತಿದ್ದೆವು. ಬೆಳಗ್ಗೆ  ತಿಂಡಿ ತಿಂದು  ಹೊರಟರೆ  ಮತ್ತೆ ಮಧ್ಯಾಹ್ನದ ಊಟಕ್ಕೆ ಬಂದರೆ, ಇಲ್ಲದಿದ್ದರೆ ರಾತ್ರಿಯ ಊಟಕ್ಕೆ  ಮನೆಗೆ ಬರುತ್ತಿದ್ದೆವು.
ಇತ್ತೀಚಿಗೆ ಇಡೀ ವಿಶ್ವವನ್ನೇ ಅಚ್ಚರಿ  ಮೂಡಿಸುತ್ತಿರುವ ಕೊರೋನ ವೈರಸ್ ತನ್ನ ಸ್ಥಾನಪಲ್ಲಟವನ್ನು ತೆರೆದಿದೆ. ಇದರಿಂದ ಸಾಕಷ್ಟು ಜನರು ಕಂಗಾಲಾಗಿದ್ದಾರೆ. ದೇಶದ ರಕ್ಷಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಇಡೀ ಭಾರತವನ್ನೇ ಬಂದ್  ಮಾಡಲಾಗಿದ್ದು. ಜನರು ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ಇದೆ. ಒಬ್ಬರಿಂದೊಬ್ಬರಿಗೆ ಹರಡುವ ಕೊರೋನ ವೈರಸ್ ಅನ್ನು ಕೊಲ್ಲಲು ಇಡೀ ವಿಶ್ವವೇ ಎದ್ದುನಿಂತಿದೆ. ಸಾರ್ವಜನಿಕರಿಗೆ  ತೊಂದರೆ ಆಗದ ರೀತಿಯಲ್ಲಿ, ಮುಖ್ಯವಾಗಿ ವೈದ್ಯರು, ಪೊಲೀಸರು, ಪೌರಕಾರ್ಮಿಕರುಗಳು ನಮ್ಮ ರಕ್ಷಣೆಗೆ ಪ್ರಾಣವೇ ನೀಡುತಿದ್ದಾರೆ.ಇಂತಹ ಸಮಯದಲ್ಲಿ ಸಾರ್ವಜನಿಕರಾದ ನಾವುಗಳು ಮನೆಯಲ್ಲಿಯೇ ಕುಳಿತು ಅವರುಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕಿದೆ.

ಅಯ್ಯೋ ನಾವು ಮನೆಯಲ್ಲಿ ಇದ್ದು ಏನು ಮಾಡಬೇಕೆಂದು ಸಾಕಷ್ಟು ಜನರು ಚಿಂತೆಗೀಡಾಗಿದ್ದಾರೆ. ಕೆಲವರು ಮನೆಯಲ್ಲಿಯೇ ಇದ್ದು,  ಅಜ್ಜಿ , ಅಮ್ಮನೊಡನೆ ಅಡುಗೆ ಮಾಡಲು ಸಹಾಯ  ಮಾಡುತ್ತಿದ್ದಾರೆ ಮತ್ತೆ  ಅವರುಗಳಿಂದ ಕಲಿತು  ಅಡುಗೆಗಳನ್ನು ತಯಾರಿಸಲು ಪ್ರಾರಂಭಿಸಿದ್ದಾರೆ.
ತಾವು ತಯಾರಿಸಿದ ತಿಂಡಿತಿನಿಸುಗಳನ್ನು ವಾಟ್ಸಪ್ ನ ಸ್ಟೇಟಸ್ ಹಾಗೂ ಫೇಸ್ಬುಕ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಹರಿ ಬಿಡುತ್ತಿದ್ದಾರೆ.


ಹಿಂದಿನ ಕಾಲದಲ್ಲಿ ಆಟವಾಡುತ್ತಿದ್ದ ಒಳಾಂಗಣ ಕ್ರೀಡೆಯಾದ ಚೌಕಬಾರ, ಅಳಗುಳಿ ಮನೆ, ಕೇರಂ ಆಟಗಳನ್ನೇ ಆಟವಾಡಿ ಪ್ರತಿನಿತ್ಯ ಸಮಯವನ್ನು ಕಳೆಯುತ್ತಿದ್ದಾರೆ.
ಮತ್ತಷ್ಟು ಜನ ಅತಿ ಹೆಚ್ಚು ಪುಸ್ತಕಗಳನ್ನು ಓದುವುದರ ಮೂಲಕ, ತಮ್ಮ-ತಮ್ಮ ಗದ್ದೆ ತೋಟಗಳಲ್ಲಿ ತಾವೇ ಕೆಲಸಗಳನ್ನು ನಿರ್ವಹಿಸುತ್ತಾ, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಮಯವನ್ನ ಕಳೆಯುತ್ತಿದ್ದಾರೆ.


ಆನ್ಲೈನ್ನಲ್ಲಿ ಗೇಮ್ ಮತ್ತು ಶುಚಿ-ರುಚಿಯಾದ ತಿಂಡಿ-ತಿನಿಸುಗಳ ತಯಾರಿಯಲ್ಲಿ ಯುವಜನತೆ.





ಸ್ನೇಹಿತರ ಸಂಪರ್ಕ ಸೇತು ಆನ್ಲೈನ್  ಆಟಗಳಿಗಂತೂ ಈಗ ಬೇಡಿಕೆ ಹೆಚ್ಚಿದೆ. ಇತ್ತೀಚಿನ ದಿನಗಳ ಹಿಂದೆ ಆನ್‌ಲೈನ್‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದ ಕಾರ್ಡ್ ಗೇಮ್ , ಪಬ್ ಜಿ , ಕ್ಯಾಂಡಿಕ್ರಶ್ , ಲೂಡೋ,  ರಮ್ಮಿ ಕೆಲವು ಗೇಮ್‌ಗಳಿಗೆ ಬೇಡಿಕೆ ಹೆಚ್ಚಿದೆ. ಈ ಮೂಲಕ ಪರಸ್ಪರ ಸ್ನೇಹಿತರನ್ನು ಸಂಪರ್ಕಿಸಿ, ದೂರದಲ್ಲೇ ಇದ್ದರೂ ಜತೆಗೆ ಇರುವ ಭಾವ ಮೂಡಿಸುವ ಆಟವಾಡುತ್ತಲೇ  ಯುವಜನತೆ ಲಾಕ್ ಡೌನ್ ನ  ಸಮಯ ಕಳೆಯುತ್ತಿದ್ದಾರೆ.
ಹೌದು  ಲಾಕ್ ಡೌನ್ ರಜೆಯಲ್ಲಿ ಏನೆಲ್ಲಾ ಕಲಿತಂತೆ ಆಯ್ತು ಎಂದು ಯುವಜನತೆಯ ಬಳಿ ಕೇಳಿದರೆ. ನಾವು ಈ ಹಿಂದೆ ಸಾಕಷ್ಟು ದುಬಾರಿ ಹಣ್ಣುಗಳನ್ನು ನೀಡಿ ಮನೆಯವರ ಹೊರಗಡೆಯೇ ಅತಿ ಹೆಚ್ಚು ತಿಂಡಿ ತಿನಿಸುಗಳನ್ನು ತಿನ್ನುತ್ತಿದ್ದೆವೆ. ಇದರಿಂದ ಸಾಕಷ್ಟು ಹಣ ಖರ್ಚಾಗುತ್ತಿತ್ತು ಹಾಗಾಗಿ
ತಿಂಡಿ-ತಿನಿಸುಗಳ ತಯಾರಿಯ ಪ್ರಯೋಗದಲ್ಲಿ ನಾವುಗಳು ತೊಡಗಿಸಿಕೊಂಡಿದ್ದೇವೆ ಎನ್ನುತ್ತಾರೆ. ಅಜ್ಜಿ ಮಾಡಿದ ತಿಂಡಿ - ಅಮ್ಮ ಮಾಡಿದ ಅಡುಗೆಗಳನ್ನು ಸಹ ಕಲಿಯುತಿದ್ದೆವೆ.
ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವವರಿಗೆ ಅಮೂಲ್ಯವಾಗಿದೆ ಕ್ಷಣ.

ಸಾಹಿತ್ಯಕ್ಷೇತ್ರಕ್ಕೆ ಲಾಕ್ ಡೌನ್ ಇದ್ದರು ಅಂತರ್ಜಾಲದ ಮೂಲಕ ಸ್ಪರ್ಧೆಗಳು.

ಸಾಹಿತ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಸಂಘ ಸಂಸ್ಥೆಗಳಿವೆ, ಜ್ಞಾನ ಭಂಡಾರ ಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳು ಕೂಡ ರೂಪುಗೊಳ್ಳುತ್ತದೆ. ಈ ಲಾಕ್ ಡೌನ್ ಸಮಯದಲ್ಲಿ ಕೆಲವು ಸಂಘಟನೆಗಳು ಆನ್ಲೈನ್ನಲ್ಲಿಯೇ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಹಾಗೂ ಸಾಹಿತಿಗಳಿಗೆ ವಿವಿಧ ಪತ್ರಿಕೆಗಳು ಕೂಡ ಲೇಖನಗಳನ್ನು ಕವಿತೆಗಳನ್ನು ಪ್ರಕಟಿಸುವ ಮುಖಾಂತರ ಪ್ರೋತ್ಸಾಹವನ್ನು ನೀಡುತ್ತಿದೆ.
ಸಾಹಿತ್ಯಕ್ಷೇತ್ರದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ,ಸಂಘಟಕರು ಬರಹಗಾರರೇ ಹೆಚ್ಚು ನಮ್ಮ ಬರವಣಿಗೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಲು, ಬರಹಗಳನ್ನು ಮನೆಯಲ್ಲಿಯೇ ಕುಳಿತು ಬರೆಯಲು ಇದು ಅಮೂಲ್ಯವಾದ ಕ್ಷಣವಾಗಿದೆ.
ಕರೋನ ಪ್ರಾರಂಭವಾದ ದಿನದಿಂದ ಪತ್ರಿಕೆಗಳಲ್ಲಿ ತಮ್ಮ ಕವಿತೆ,  ಲೇಖನದ ಮೂಲಕ ಸಾಮಾಜಿಕ ಜಾಗೃತಿಯನ್ನೂ ಕೂಡ ಮೂಡಿಸುತ್ತಿದ್ದಾರೆ.

ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಸೆಲೆಬ್ರಿಟಿಗಳ ಮಾತುಕತೆ.!

ಕೊರೋನ ದಿಂದ ಚಿತ್ರರಂಗಕ್ಕೂ  ನಷ್ಟವಾಗಿದೆ. ದೇಶ ರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್ ಡೌನ್ ಅನ್ನು  ಜಾರಿಮಾಡಿದೆ, ಚಲನಚಿತ್ರಗಳ ಶೂಟಿಂಗ್ , ಮನರಂಜನೆಗಳ ಶೂಟಿಂಗ್, ಎಲ್ಲವೂ ಬಂದ್ ಆಗಿದೆ. ಇದರಿಂದ ಕಲಾವಿದರುಗಳು ಮನೆಯಲ್ಲಿಯೇ ಮನೆಯವರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಕೆಲ ಕಲಾವಿದರುಗಳು ಜನರ ಸಹಾಯಸ್ತ ಕ್ಕೂ ಕೂಡ ಕೈಜೋಡಿಸಿದ್ದಾರೆ. ಎಲ್ಲದರ ನಡುವೆಯೂ ಜನರೊಂದಿಗೆ ಮಾತನಾಡುವ ಸಲುವಾಗಿ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಜನರೊಂದಿಗೆ ಮಾತುಕತೆ ಕೂಡ ನಡೆಸುತ್ತಿದ್ದಾರೆ. ಸಿನಿಮಾ ಪತ್ರಕರ್ತರು, ನಿರೂಪಕರು, ಸಿನಿಮಾ ತಾರೆಯರು, ಕಲಾವಿದರುಗಳು ಪ್ರತಿನಿತ್ಯ ಸಂದರ್ಶಿಸುವ ಮೂಲಕ ಜನರಿಗೆ ಮನರಂಜನೆಯನ್ನು ನೀಡುತ್ತಿದ್ದಾರೆ.

ಮನೆಯಲ್ಲಿಯೇ ಕುಳಿತು ಒಗ್ಗಟ್ಟಿನ ಮಂತ್ರ ಜಪಿಸಿದ ವಿದ್ಯಾರ್ಥಿಗಳು.

ಒಂದೇ ರೀತಿಯ ಬದುಕಿಗೆ ಬೀಗುತ್ತಿದ್ದ ನಾವು ,ಇಂದು ಎಲ್ಲವನ್ನೂ ಬಿಟ್ಟು , ನಮ್ಮನು , ನಮ್ಮವರನ್ನು ಉಳಿಸಿಕೊಳ್ಳುವ ಸಲುವಾಗಿ ಬಾಗಿ ನಡೆಯುತ್ತಿದ್ದೇವೆ ಮಹಾ ಮಾರಿಯ ವಿರುದ್ಧ ಮಹಾ ಸಂಗ್ರಾಮದ ಹೋರಾಟಗಾರರಾಗಿ ನಿಂತಿದ್ದೆವೆ. ಇಂತಹ ಸಂದರ್ಭದಲ್ಲಿ
ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಸೇರಿ (You can never stop the sunset , but you can definitely stop the novel corona virus.)

 ನೀವು ಎಂದಿಗೂ ಸೂರ್ಯಾಸ್ತವನ್ನು ನಿಲ್ಲಿಸಲು ಸಾಧ್ಯವಿಲ್ಲ, ಆದರೆ ನೀವು ಖಂಡಿತವಾಗಿಯೂ  ಕರೋನಾ ವೈರಸ್ ಅನ್ನು ನಿಲ್ಲಿಸಬಹುದು. ಎಂಬ ಒಂದು  ಘೋಷವಾಕ್ಯವನ್ನು ರಚಿಸಿ ಪೋಟೋ ಕ್ಲಿಕ್ಕಿಸಿಕೊಂಡು ಕೊರೋನ ಜಾಗೃತಿ ಮೂಡಿಸುತ್ತಿದ್ದಾರೆ.

ಎಲ್ಲರೂ ಹೀಗೆ ಭಿನ್ನಭಿನ್ನ ಯೋಜನೆಗಳನ್ನು ರೂಪಿಸಿಕೊಂಡು ರಜೆಯ ಅಮೂಲ್ಯ ಕ್ಷಣಗಳನ್ನು ಅನುಭವಿಸುವ ಮೂಲಕ ಒಂದಿಷ್ಟು ಹೊಸದನ್ನು ಕಲಿಯುವ ಪ್ರಯತ್ನ ಮಾಡೋಣ.

ಲೇಖನ : 
ನಿರಂಜನ್ ಎ.ಸಿ ಕಣಗುಪ್ಪೆ
ಯುವ ಬರಹಗಾರರು, ಬೇಲೂರು.
7676394414

Post a Comment

0 Comments