ಡ್ರಾಮಾ ಜೂನಿಯರ್ಸ್ ಸೀಸನ್ -೨ ರ ವಿಜೇತೆ ವಂಶಿ ರತ್ನಕುಮಾರ ಈಗ ಪೈಲ್ವಾನ್ ಚಿತ್ರದಲ್ಲಿ ಮಿಂಚು

ಡ್ರಾಮಾ ಜೂನಿಯರ್ಸ್ ಸೀಸನ್ -೨ ರ ವಿಜೇತೆ ವಂಶಿ ರತ್ನಕುಮಾರ ಈಗ ಪೈಲ್ವಾನ್ ಚಿತ್ರದಲ್ಲಿ ಮಿಂಚು

ಹೆಣ್ಣುಮಕ್ಕಳು ಕೌಟಂಬಿಕ ಬದುಕಿನಲ್ಲಿ ಮಗಳಾಗಿ ಮಾತೆಯಾಗಿ ಬದುಕಿದರೆ ಸಾಕು ಎನ್ನುವ ಕಾಲಘಟ್ಟದಲ್ಲಿ ಹೆಣ್ಣು ಕೂಡ ಸಮಾಜದಲ್ಲಿ ತನ್ನ ಕನಸಿನೊಂದಿಗೆ ಮುಗಿಲೆತ್ತರಕ್ಕೆ ಸಾಧನೆ ಮಾಡಬಲ್ಲಳು ಎಂಬ ಅದೆಷ್ಟು ಮಹಿಳೆಯರ ಪೈಕಿ ಸಾಮಾನ್ಯ ಕುಟುಂಬದಲ್ಲಿ ಜನಿಸಿ ಡ್ರಾಮಾ ಜೂನಿಯರ್ ಸೀಸನ್ -೨ರಲ್ಲಿ  ಮಿಂಚಿ, ಈಗ ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಚಿತ್ರದಲ್ಲೂ ಕೂಡ ಗುರುತಿಸಿಕೊಂಡಿದ್ದಾರೆ.
ಅಯ್ಯೋ ಈಗ ವಿಷಯಕ್ಕೆ ಬಂದೆ ನೋಡಿ ಯಾರು ಬಗ್ಗೆ ಹೇಳುತ್ತಿದ್ದೇನೆ ಅಂತ ಚಿಂತಿಸಬೇಡಿ, ನಾನು ಹೇಳುವುದಕ್ಕೆ ಹೊರಟಿರುವ ಒಬ್ಬ ಹೆಣ್ಣು ಮಗಳ ಸಾಧನೆಯ ಕುರಿತ ಪರಿಚಯ.,ಆ ಹೆಣ್ಣು ಮಗಳು ಯಾರೆಂದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯತಾಲೂಕಿನ ಅಮರಮುಡ್ಕೂರು ಗ್ರಾಮದ ಮಂಗಳೂರು ವಿಶ್ವವಿದ್ಯಾನಿಲಯದ ಉದ್ಯೋಗಿಯಾಗಿರುವ ರತ್ನಕುಮಾರ್ ಮತ್ತು  ಶ್ರೀಮತಿ  ರೇವತಿಅವರ ಪುತ್ರಿ ವಂಶಿ ರತ್ನಕುಮಾರ್ ಅವರ ಪರಿಚಯ ಸಾಧನೆ.
ಪ್ರಸ್ತುತ ವಿಶ್ವಮಂಗಳ ಆಂಗ್ಲ ಮಾಧ್ಯಮ ಶಾಲೆ‌ ಕೋಣಾಚಿಯಲ್ಲಿ 9ನೇ ತರಗತಿಯ ವ್ಯಾಸಂಗ ಮಾಡುತ್ತಿರುವರು ಇವರು  ಬಾಲ್ಯದಲ್ಲಿಯೇ ಅದ್ಭುತ ಸಾಧನೆಯನ್ನು ಮಾಡ್ತಿದ್ದಾರೆ.
ಕೇವಲ ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ರಾಮಾ ಜೂನಿಯರ್ಸ್  ಜಾಹಿರಾತನ್ನು ನೋಡಿ   ಹೋಗಬೇಕೆಂದು ಆಸೆಯನಿಟ್ಟು ಡ್ರಾಮಾಜೂನಿಯರ್ಸ್ ಸೀಸನ್-೨  ಆಯ್ಕೆಯಾಗಿ ಕರ್ನಾಟಕದ  ಮನೆಮನಗಳಲಿ ಹೆಸರುವಾಸಿಯಾದ ಈಕೆ. ಇದೇ ವೇದಿಕೆಯಲ್ಲಿಆಳವಾಗಿ ನಟನೆಯನ್ನು ಕಲಿತುಕೊಂಡಳು. ಹಿರಿಯ ನಟಿ ಲಕ್ಷ್ಮಿ ಅವರ ಜೊತೆ ನಟಿಸಿದ ಇವಳ ನಟನೆಯನ್ನು ಮೆಚ್ಚಿ ಸ್ವತಃ ಲಕ್ಷ್ಮಿ ಅವರೇ ಇವಳನ್ನು ಜೂನಿಯರ್ ಲಕ್ಷ್ಮಿ ಎಂದು ಬಿರುದನ್ನು ನೀಡಿದರು.
ಹೇಗಪ್ಪ ನಟಿಸುವುದು ಎಂದು ಚಿಂತಿಸುತ್ತಿದ್ದ ಇವಳು ಡ್ರಾಮಾಜೂನಿಯರ್ ಸೀಸನ್ -೨ ವಿಜೇತೆ ಎಂಬ ಕೀರಿಟವನ್ನು ಪಡೆದಳು.ನಂತರ ದೊಡ್ಡ ಕಲಾವಿದೆ ಯಾಗಬೇಕು , ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಮತ್ತು ಒಂದೊಳ್ಳೆ ದಕ್ಷ ಅಧಿಕಾರಿಯಾಗಿ ಬಡವರ ಸೇವೆ ಮಾಡಬೇಕೆಂಬ ಬಯಕೆ ಇದೆ.ಹಾಗೂ ಸಿನಿಮಾ ಕ್ಷೇತ್ರದಲ್ಲೂ ಕೂಡ ನನ್ನನ್ನು ನಾನು ಗುರುತಿಸಿಕೊಳ್ಳಬೇಕೆಂದು ಗುರಿಯನ್ನು ಇಟ್ಟಿಕೊಂಡಿರುವಾಗಲೇ ಖ್ಯಾತ ಚಲನಚಿತ್ರ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇವರು ನಟಿಸಿರುವ ಪೈಲ್ವಾನ್  ಚಿತ್ರದಲ್ಲಿ ಬಾಲ ನಟಿಯಾಗಿ  ಪಾದಾರ್ಪಣೆಗೈದು  ಎರಡು ವಿಭಿನ್ನ ಪಾತ್ರದಲ್ಲಿ ತನ್ನ ಅತ್ಯುತ್ತಮ ನಟನೆಯಿಂದ ಉತ್ತಮ ಜನಮನ್ನಣೆ ಗೈಯ್ಯುತ್ತಿರುವ ಬಾಲನಟಿ ವಂಶಿರತ್ನಕುಮಾರ.
ಜ್ಹೀ ಕನ್ನಡ ವಾಹಿನಿಯು ನಡೆಸುವ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” (ಲಿಟ್ಲ್ ಮಾಸ್ಟರ್) ನಲ್ಲಿಯೂ ಭಾಗವಹಿಸಿ 
ಅತ್ಯುತ್ತಮ ನಿರ್ವಹಣೆ ಹಾಗೂ ಗೌರವವನ್ನು ಪಡಿಸಿದ್ದಾರೆ.
ಭರತನಾಟ್ಯ, ಪ್ರಾಶ್ಚಾತ್ಯ ನೃತ್ಯ ಮತ್ತು ಶಾಸ್ತ್ರೀಯ ನೃತ್ಯ ಕಾರ್ಯಕ್ರಮಗಳನ್ನು ಧಾರ್ಮಿಕ, ಸಾಮಾಜಿಕ, ಶೈಕ್ಷಣ ಕ್ಷೇತ್ರದಲ್ಲಿದಕಾರ್ಯಕ್ರಮಗಳಲ್ಲಿ ಸುಮಾರು 300ಕ್ಕೂ ಮೇಲ್ಪಟು ತನ್ನ ಪ್ರತಿಭೆಯ ಅನಾವರಣಗೊಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ವಿಭಿನ್ನ ಶೈಲಿಯಲ್ಲಿ ಸಂಘಟಿಸುತ್ತಿರು  “ಚಿಗುರು” ಕಾರ್ಯಕ್ರಮದಲ್ಲಿ  “ಸುಗಮ ಸಂಗೀತ” ದ ರಸದೌತಣವನ್ನು ಬಿತ್ತಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ಮೂಡಬಿದ್ರೆ ಇವರ ಆಶ್ರಯದಲ್ಲಿ ನಡೆಯುತ್ತಿರುವ “ವಿದ್ಯಾರ್ಥಿ ಸಿರಿ”
ಕಾರ್ಯಕ್ರಮದಲ್ಲಿ ಕಳೆದ ಐದು ವರ್ಷಗಳಿಂದ ನೃತ್ಯ ಪ್ರದರ್ಶನ. ಮಂಗಳೂರಿನ “ಬಿಗ್ ಬಜಾರ್” ನಡೆಸಿದ “ಬಿಗ್ ಪುಟಾಣಿ ಉತ್ಸವ -೨ ಸಂಗೀತ ಮತ್ತು ನೃತ್ಯ ಪ್ರದರ್ಶನ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸುಳ್ಯದಲ್ಲಿ ನಡೆದ ರಾಜ್ಯಮಟ್ಟದ ಅರೆಭಾಷೆ 
ಸಂಸ್ಕೃತಿ ಮತ್ತು ಸಾಹಿತ್ಯ ಸಮ್ಮೇಳನದಲ್ಲಿ ವಿನೂತನ ಶೈಲಿಯ “ನೃತ್ಯ ಸಂಗಮ”. ಮೈಸೂರಿನಲ್ಲಿ ನಡೆದ “ಮೈಸೂರು ಡ್ಯಾನ್ಸಿಂಗ್ ಸ್ಟಾರ್” ಕಾರ್ಯಕ್ರಮದಲ್ಲಿ ಭಾಗವಹಿಸಿ ಮುನ್ನಣೆಯೊಂದಿಗೆ ಪ್ರಶಂಸೆ.ಪಡೆದಿರುತ್ತಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಒಕ್ಕೂಟದ ವತಿಯಿಂದ ಕೊಣಾಜೆಯಲ್ಲಿ ನಡೆದ 
ಕೃಷಿಮೇಳದಲ್ಲಿ ನೃತ್ಯ ಪ್ರದರ್ಶನ.
ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಪರಿಷತ್ ಇದರ ಆಶ್ರಯದಲ್ಲಿ ನಡೆದ “ಸಂಭ್ರಮ” ಎಂಬ 
ವಿನೂತನ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ.
ಮಂಗಳೂರು ವಿಶ್ವವಿದ್ಯಾನಿಲಯದ ಕೈಗಾರಿಕೆ ರಸಾಯಯನಶಾಸ್ತ್ರ ಮತ್ತು ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಸಂಯೋಜಿಸಲ್ಪಟ್ಟ ರಾಷ್ಟ್ರೀಯ ಮಟ್ಟದ ನ್ಯಾನೋ ತಂತ್ರಜ್ಞಾನದ ಮೇಲೆ ರಾಷ್ಟ್ರೀಯ ಸಮ್ಮೇಳನದ ಪ್ರಯುಕ್ತ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡುವುದರೊಂದಿಗೆ 
ಮಂಗಳೂರು. ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳು ಹಾಗೂ ಇತರ ಅತಿಥಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಜೇಸೀ ಸಂಸ್ಥೆಯ “ವ¬ಯ ಸಮ್ಮೇಳನ”ದಲ್ಲಿ ಜೂನಿಯರ್ ಜೇಸೀಯಾಗಿ ನೃತ್ಯ ಪ್ರದರ್ಶನ ಮತ್ತು  ಏಕಪಾತ್ರಭಿನವನ್ನುಮಾಡಿದ್ದಾರೆ.
V4 ನ್ಯೂಸ್ ವಾಹಿನಿಯಲ್ಲಿ ಮಕ್ಕಳ ದಿನಾಚರಣೆ ದಿವಸ ನಡೆದ “ಚಿಣ್ಣರ ಚಿಲಿಪಿಲಿಯಲ್ಲಿ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಭಾಗಿ.
ಕೆ.ಸ್ಟಾರ್ ಕನ್ನಡ (ಕರಾವಳಿ ಕನ್ನಡ) ವಾಹಿನಿಯಲ್ಲಿ ನಡೆದ “ಜ್ಯೂನಿಯರ್ ಡ್ರಾಮ ಫಂಟರ್ಸ್” ಸ್ಪರ್ಧೆಯಲ್ಲಿ
ಭಾಗವಹಿಸುವಿಸಿರುತ್ತಾರೆ.
ಲಭಿಸಿದ ಪುರಸ್ಕಾರ, ಮನ್ನಣೆ ಹಾಗೂ ಸನ್ಮಾನಗಳು
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ಮೂಡಬಿದ್ರೆ ವತಿಯಿಂದ “ಆಳ್ವಾಸ್ ವಿದ್ಯಾರ್ಥಿ ಸಿರಿ-2017” ಪ್ರಶಸ್ತಿ.
ಜೆ.ಸಿ.ಐ. ಮಂಗಳಗಂಗೋತ್ರಿ ಕೋಣಾಜೆ ಇದರ ವತಿಯಿಂದ “ಬಾ¬ಲ ಪ್ರತಿಭೆ-2017” ಪುರಸ್ಕಾರ.
ರೋಟರಿ ಕ್ಲಬ್ ಸುಬ್ರಹ್ಮಣ್ಯ ಇವರ ವತಿಯಿಂದ “ಕಲಾ ರಶ್ಮಿ ಜ್ಯೂನಿಯರ್ ¬ಲಕ್ಷ್ಮೀ ವಂಶಿ” ಎಂಬ ಬಿರುದುನೊಂದಿಗೆ ಸನ್ಮಾನ.
ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ (ರಿ) ಸುಳ್ಯ ವತಿಯಿಂದ “ರಂಗಮನೆ ಪ್ರತಿಭಾ ಪುರಸ್ಕಾರ-೨೦೧೮ ಮನ್ನಣೆ.
ಕೊಣಾಜೆ ಗ್ರಾಮ ಪಂಚಾಯತ್ ವತಿಯಿಂದ “ಶ್ರೇಷ್ಠ ಬಾಲ ಪ್ರತಿಭೆ-2017” ಪುರಸ್ಕಾರದೊಂದಿಗೆ ಸನ್ಮಾನ.
ಬೆಳ್ತಂಗಡಿಯ ಹುಣ್ಸೆಕಟ್ಟೆಯಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭದಲ್ಲಿ ಕೋಟಿ ಚೆನ್ನಯ 
ಎಂಟರ್ ಪ್ರೈಸಸ್ ಇವರಿಂದ “ಡ್ರಾಮಾ ಕ್ವಿನ್” ಎಂಬ ಬಿರುದು.
ಸುಳ್ಯದಲ್ಲಿ ನಡೆದ ಅಂತರ್‍ರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ವತಿಯಿಂದ ಪ್ರಾಂತೀಯ ಸಮ್ಮೇಳನದಲ್ಲಿ ಲಯನ್ಸ್ 
ಗೌರವ ಸನ್ಮಾನ.
ನಳಂದಾ ರೆಸಿಡೆನ್ಸಿ ಅಂತರ್‍ರಾಷ್ಟ್ರಿಯ ಸ್ಕೂಲ್ ಬೆಂಗಳೂರು ವತಿಯಿಂದ ಸನ್ಮಾನ ಗೌರವ.
ಸಪ್ತಸ್ವರ ಕಲಾತಂಡ (ರಿ) ಕೊಣಾಜೆ, ಮಂಗಳೂರು ವತಿಯಿಂದ ಪ್ರತಿಭಾ ಪುರಸ್ಕಾರ -೨೦೧೭ ಪ್ರಶಸ್ತಿ.
ಶ್ರೀ ಸಿದ್ಧರಾಮೇಶ್ವರ ಸಂಕಲ್ಪ ಜಾತ್ರೆ ಬೆಳಗಾವಿಯಲ್ಲಿ ಸಾಂಸ್ಕೃತಿಕ ಸಿಂಚನ ನೃತ್ಯಪ್ರ ದರ್ಶನದಲ್ಲಿ ಗೌರವ.
ಮಂಗಳೂರಿನ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದಿಂದ ಪ್ರತಿಭಾ ಪುರಸ್ಕಾರ
ಯುವ ಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಇದರ ವತಿಯಿಂದ ಸನ್ಮಾನ.
ಹಲವು ಸಂಘ ಸಂಸ್ಥೆಗಳು ನಡೆಸಿದಂತಹ ಭಾಷಣ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು 
ಪಡೆದಿರುತ್ತಾರೆ.ಇವರ ಸಾಧನೆ ಇನ್ನಿತರ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡಿ ನಮ್ಮ ದೇಶ , ರಾಜ್ಯ, ಜಿಲ್ಲೆ, ತಾಲ್ಲೂಕಿನ ಘನತೆಯನ್ನು ಇಡೀ ಜಗತ್ತಿನಾದ್ಯಂತ ಪಸರಿಸಿ ಹಲವಾರು ದಾಖಲೆ ಇವರಿಂದಾಗಲಿ ಎಂದು ಆಶಿಸುತ್ತೆನೆ. .
ಲೇಖನ ಪರಿಚಯ ~ 
                          ನಿರಂಜನ್ ಎ ಸಿ ಬೇಲೂರು 
                         ಯುವ ಕವಿಗಳು , ಹಾಸನ ಜಿಲ್ಲೆ
                                ಮೊ : 7676394414 

ಶುಭಹಾರೈಕೆಯ ನುಡಿ : 
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂಬ ಕಗ್ಗದ ಹಿತೋಕ್ತಿ ಬಹುಶಃ ಡ್ರಾಮ ಜೂನಿಯರ್ಸ್ ಖ್ಯಾತಿಯ ವಂಶಿಗೆ ಅಕ್ಷರಶಃ ಅನ್ವಯಿಸುತ್ತದೆ. ಏನೊಂದು ನಟನೆಯ ಪರಿಕಲ್ಪನೆಯೇ ಇಲ್ಲದ ಈ ಪೋರಿ, ದೂರದರ್ಶನ ಎಪಿಸೋಡ್ ನೋಡಿ ಆ ಕಡೆಗೆ ಆಕರ್ಷಿತಳಾಗಿ ಆಕಸ್ಮಿಕವಾಗಿ ಆಯ್ಕೆಯಾಗಿ, ಆಯ್ಕೆಯನ್ನು ಶ್ರದ್ಧೆ ಹಾಗೂ ಕಠಿಣ ತಾಲೀಮುಗಳ ಮೂಲಕ ಸಮರ್ಥಿಸಿಕೊಂಡು ತೀರ್ಪುಗಾರರ ಜೊತೆಗೆ ಇಡೀ ಜೀಕನ್ನಡ ವೀಕ್ಷರೆದೆಯಲ್ಲಿ ಗಟ್ಟಿಯಾದ ಸ್ಥಾನವನ್ನು ಮಾಡಿಕೊಂಡ ಈ ಪೋರಿ ನವರಸಗಳನ್ನು ಲೀಲಾಜಾಲವಾಗಿ ನಟಿಸಿ ನಿಬ್ಬೆರಗನ್ನುಂಟು ಮಾಡಿದವಳು. ಇವಳ ಆಸೆ- ಆಕಾಂಕ್ಷೆಯಂತೆ ಕನ್ನಡ ಕಿರುತೆರೆ ಹಾಗೂ ಚಿತ್ರರಂಗದಲ್ಲಿಯೂ ಯಶಸ್ಸಿನ ಮೈಲುಗಲ್ಲುಗಳನ್ನು ಸ್ಥಾಪಿಸಲಿ ಎಂದು ಶುಭ ಕೋರುತ್ತೇನೆ.               
                            ~ಕೊಟ್ರೇಶ್ ಎಸ್ ಉಪ್ಪಾರ್
                                   ರಾಜ್ಯಾಧ್ಯಕ್ಷರು
  ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು.

ಬಾಲಪ್ರತಿಭೆ ವಂಶಿ ಅವರಿಗೆ ಒಳ್ಳೆಯದಾಗಲಿ ನಿಮಗೆ , ಇನ್ನೂ ಹೆಚ್ಚು ಹೆಚ್ಚು ಯಶಸ್ಸು ಸಿಗಲಿ  ಕನಸುಗಳು ನನಸಾಗಲಿ  ಇನ್ನೂ ದೊಡ್ಡಮಟ್ಟಟದಲ್ಲಿ ಸಾಧನೆಯನ್ನು ಮಾಡಿ ಶುಭವಾಗಲಿ.
                         - ಶಶಿಮಿತ್ರ ಸಾಮ್ರಾಟ್, ಚಿತ್ರ ನಟ

Post a Comment

0 Comments