(ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಸಾಹಿತಿ ಹಾಗೂ ಉಪನ್ಯಾಸಕ ಸೋಂಪುರ ಪ್ರಕಾಶ್ ಅವರ ಜೊತೆ ಕವಿ ಕಾವ್ಯ ಸುಧೆ ನಡಸಿದ ಸಂದರ್ಶನ.)



ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಬೇಕು : ಪ್ರಕಾಶ್ ಸೋಂಪುರ

ಸಂದರ್ಶನ : 
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಸೋಂಪುರ ಎಂಬ ಪುಟ್ಟ ಗ್ರಾಮದಲ್ಲಿ ಚನ್ನೇಗೌಡ ಮತ್ತು ಶಾರದ ದಂಪತಿಗಳ ಪುತ್ರನಾಗಿ ೧ - ೦೪ -೧೯೭೭ ರಂದು ಜನಿಸಿದರು.
ಪ್ರಸ್ತುತ ಬೇಲೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಬಹುಮುಖ ಪ್ರತಿಭೆ ಸಾಹಿತಿಯಾಗಿ 'ಕಾಡಿದ ಮನ' , 'ಭೂತ ಬಂಗಲೆಯ ಸುತ್ತಾ', 'ಹಳಿ ತಪ್ಪಿದ ಬದುಕು' ಎಂಬ ಕೃತಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. 

ಪ್ರಶ್ನೆ : ನಿಮ್ಮ ಬದುಕು ಬರಹದ ಪರಿಚಯ ತಿಳಿಸಿ? 

ನಮ್ಮ ಊರು ಪುಟ್ಟ ಗ್ರಾಮ ಮೂಲತಃ ಕೃಷಿಕ ಕುಟುಂಬದಿಂದ ಬಂದಂತಹವನು , ತಂದೆ ತಾಯಿ ಕೂಡ ಶ್ರಮಿಕ ಜೀವಿಗಳು ತುಂಬಾ ಶ್ರಮಪಟ್ಟಿಕೊಂಡು ರೈತ ಜೀವನವನ್ನ ಮಾಡಿಕೊಂಡಿದಂತವರು, ಆ ಹಿನ್ನೆಲೆಯಲ್ಲಿ ಬಂದಂತಹ ನನಗೆ ಬಡತನ ಎಂದರೇನು, ಬದುಕು ಅಂದರೇನು, ನಾನು ಮುಂದೆ ಕಲಿಯ ಬೇಕಾದ ಜೀವನದ ಮೌಲ್ಯದ ಪಾಠಗಳನ್ನು ಕಲಿಸಿಕೊಟ್ಟಿತು. ನಮ್ಮ ಮನೆಯ ಪರಿಸರದಲ್ಲಿ ತಂದೆ , ತಾಯಿ, ಅಕ್ಕ, ತಂಗಿ ಇದರಲ್ಲಿಯೇ ನನ್ನ ಬದುಕು ಸಾಗಿತು. 

ಪ್ರಶ್ನೆ : ತಾವು ವಿದ್ಯಾಭ್ಯಾಸ ಮಾಡಿದ್ದು ಎಲ್ಲೆಲ್ಲಿ? 

ಪ್ರಾಥಮಿಕ ಶಿಕ್ಷಣವನ್ನು ನಮ್ಮ ಸ್ವ ಗ್ರಾಮದಲ್ಲಿ ಮಾಧ್ಯಮಿಕ ಮತ್ತು ಪ್ರೌಢಶಾಲಾ ವ್ಯಾಸಂಗವನ್ನು ಪಕ್ಕದ ಊರಾದ ಹೆಬ್ಬಾಳ ಗ್ರಾಮ ಹಾಗೆಯೇ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನ ಸರ್ಕಾರಿ ಶಾಲಾ ಕಾಲೇಜುಗಳಲ್ಲಿಯೇ ಮಾಡಿದ್ದು.

ಪ್ರಶ್ನೆ : ಬಾಲ್ಯದ ಸವಿ ನೆನಪಿನ ಕ್ಷಣಗಳು? 

ಅಂತಹ ಸವಿನೆನಪುಗಳು ಯಾವ ನೆನಪುಗಳೂ ಇಲ್ಲ, ಕಾರಣ ಮನೆಯ ಪರಿಸ್ಥಿತಿ ಅಷ್ಟು ಉತ್ತಮವಾಗಿರಲಿಲ್ಲ , ನಮ್ಮ ಬಡತನವೆ ನಮಗೆ ಬದುಕನ್ನ ಕಟ್ಟಿಕೊಟ್ಟಿದೆ. 

ಪ್ರಶ್ನೆ : ನೀವು ಬೆಳೆದು ಬಂದ ದಾರಿ.?

ನಾನು ಮೊದಲೇ ಹೇಳಿದಾಗೆ  ಬಡ ರೈತ ಕುಟುಂಬದಿಂದ ಬಂದಂತಹವನು, ಬಡತನವನ್ನೇ ಉಂಡು , ಹಾಸಿ ಮಲಗಿದಂತಿತ್ತು. ನಮ್ಮ ಮನೆಯ ಪರಿಸ್ಥಿತಿ ಬಡವನಾಗಿ ಹುಟ್ಟಿದ್ದು ತಪ್ಪಿಲ್ಲ , ಆದರೆ ಬಡವನಾಗಿ ಬದುಕುವುದು ತಪ್ಪು ಎಂದು ತಿಳಿದು, ಆ ಬಡತನದಿಂದ ಹೊರಗೆ ಬರಲು  ಏನೆಲ್ಲಾ ಶ್ರಮ ಪಡಬೇಕು ಆ ಎಲ್ಲ ಶ್ರಮ ಪಟ್ಟು ಈಗ ಇಲ್ಲಿಯವರೆಗೆ ಬಂದಿದ್ದೆನೆ.

ಪ್ರಶ್ನೆ :ವೃತ್ತಿ ಬದುಕನ್ನ ಆರಂಭಿಸಿದ್ದು ಹೇಗೆ ಮತ್ತು ಎಲ್ಲಿ? 

ನಾನು ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನ ಎರಡು ಚಿನ್ನದ ಪದಕದೊಂದಿಗೆ ಪಡೆದು ಅನಿವಾರ್ಯವಾಗಿ ವೃತ್ತಿ ಬದುಕನ್ನ  ಆರಂಭಿಸಿದ್ದು, ದಿವ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂಗ್ಲೀಷ್ ನಲ್ಲಿ ಪಾಠ  ಬೋಧನೆ ಮಾಡಬೇಕಾದ ಅನಿವಾರ್ಯಯೂ ಎದುರಾಯಿತು. ಅಲ್ಲಿಂದ ವೃತ್ತಿ ಆರಂಭಿಸಿದೆ. 

ಪ್ರಶ್ನೆ : ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆಯಾಗಿದ್ದು ಮತ್ತು ಸಾಹಿತ್ಯದ ಒಲವು ಬಂದಿದ್ದು  ಹೇಗೆ? 

ನಾನು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುವಾಗಲೇ ಸಾಹಿತ್ಯದ ಗೀಳು ಅಂಟಿಕೊಂಡಿತು. ಜಿ.ಎಸ್. ಶಿವರುದ್ರಪ್ಪ ರಂತಹ ಸಾಹಿತಿಗಳ ಸಾಹಿತ್ಯ ಇಷ್ಟವಾಯಿತು. ಬಾಲ್ಯದ ಅದೆಷ್ಟೋ ಕಹಿ ಘಟನೆಗಳು ನನ್ನೊಳಗೆ ಭಾವನೆಗಳ ಕಟ್ಟೆಯೊಡೆಸಲು ಕಾಯುತ್ತಿದ್ದವು, ಅವು ಪದಗಳಾಗಿ ಇಳಿಯಲು ಹೆಚ್ಚು  ಕಾಯಲೇ ಇಲ್ಲ. ಅಂದಿನಿಂದ ಸಾಹಿತ್ಯದ ಒಲವು ಇನ್ನೂ ಹೆಚ್ಚಾಯಿತು. 

ಪ್ರಶ್ನೆ : ಸಾಹಿತ್ಯ ಪರಿಷತ್ತಿನೊಂದಿಗೆ ನಿಮ್ಮ ಒಡನಾಟ? ಸಾಹಿತ್ಯ ಕ್ಷೇತ್ರದ ನಿಮ್ಮ ಸಾಧನೆಗೆ ಪೂರಕವಾಯ್ತೇ? 

ಕಳೆದ ಅವಧಿಯಲ್ಲಿ ಬಿ.ಎನ್.ಆನಂದ ಅವರು ಅಧ್ಯಕ್ಷರಾಗಿದ್ದಾಗ ನನ್ನನ್ನು ಗುರುತಿಸಿ ಕ ಸ ಬಾ ಹೋಬಳಿ ಘಟಕದ ಅಧ್ಯಕ್ಷರನ್ನಾಗಿ ಮಾಡಿದರು  ಆನಂತರ ಸಾಂಸ್ಕೃತಿಕ ಕಾರ್ಯದರ್ಶಿಯಾಗಿಯೂ ಆಯ್ಕೆ ಮಾಡಿದ್ದರು. ಅಲ್ಲಿಂದ ಪರಿಷತ್ತಿನೊಂದಿಗೆ ಒಡನಾಟ ಶುರುವಾಗಿದ್ದು. 
ನನ್ನ ಕೃತಿಗಳನ್ನು ಪರಿಷತ್ತಿನ ಸಹಕಾರದೊಂದಿಗೆ ಬಿಡುಗಡೆಗೊಳಿಸಿದ್ದೇನೆ ಮಯ ಅನೇಕ ಅಗ್ರ ಕವಿಗಳ ಪರಿಚಯವಾಗಿದೆ. 


ಪ್ರಶ್ನೆ : ಯುವ ಸಾಹಿತಿಗಳಿಗೆ ನಿಮ್ಮಿಂದ ಏನಾದರೂ ಕಿವಿ ಮಾತು? 

ತಂತ್ರಜ್ಞಾನ  ವೇಗವಾಗಿ  ಬೆಳೆಯುತ್ತಿರುವ ಈ ಕಾಲದಲ್ಲಿ ಯುವಕರು ವಾಟ್ಸಪ್ , ಫೇಸ್‌ಬುಕ್‌ ಎಂದುಕೊಂಡು ವಿನಾಃ ಕಾರಣ ಕಾಲಹರಣ ಮಾಡದೆ ಇರುವ ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಬೇಕು ಎಂದರು. 

ಪ್ರಶ್ನೆ : ನಿಮ್ಮ ಕವನ ಸಂಕಲನದ  ಕುರಿತು ಒಂದಿಷ್ಟು ಮಾಹಿತಿ? 

ಕವನ ಸಂಕಲನದ ಹೆಸರೇ ಸೂಚಿಸುವಂತೆ ಅನೇಕ ನೈಜ ಸನ್ನಿವೇಶಗಳು , ಘಟನೆಗಳು,‌ನನ್ನ ಮನಸ್ಸನ್ನು ಕಾಡುತಿದ್ದವು. ಬಡತನˌ ಹಸಿವು , ದುಃಖ ನೋವುಯಾತನೆಗಳನ್ನೆಲ್ಲ. ಕವಿತೆಗಳಲ್ಲಿ  ಕಟ್ಟಿಕೊಡುವ ಕೆಲಸ ಮಾಡಿದ್ದೇನೆ.

ಪ್ರಶ್ನೆ :  ನಿಮ್ಮ ವೈಚಾರಿಕ ಲೇಖನದ ಕುರಿತು? 

ಬದುಕಿನ ವಾಸ್ತವ ಘಟನೆಯನ್ನೇ ಬರೆದಿದ್ದೇನೆ. ಗ್ರಾಮೀಣ ಭಾಗದ  ಜನರ ಬದುಕು, ಮನಸ್ಸು ತಲ್ಲಣಗಳು , ಬೆಳೆದು ನಿಂತ ಮಕ್ಕಳು ತಂದೆ ತಾಯಿಗಳಿಗೆ  ಅಗೌರವದಿಂದ ನೆಡೆದು ಕೊಳ್ಳುತ್ತಿರುವ ರೀತಿ, ವಿದ್ಯಾರ್ಥಿಗಳ ಗೂತ್ತು - ಗುರಿಯಿಲ್ಲದ ಅಭ್ಯಾಸ ಕ್ರಮ ಇತ್ಯಾದಿ ವಿಷಯಗಳು ಒಳಗೊಂಡಿದೆ.


ಪ್ರಶ್ನೆ :  ನಿಮ್ಮ ಕಥಾ ಸಂಕಲನದ ವಸ್ತು-ವಿಷಯ? 

ಇದರಲ್ಲಿಯೂ  ಗ್ರಾಮೀಣ ಭಾಗದ ಸೊಗಡು ಕಾಣಿಸುತ್ತದೆ. ಸ್ತ್ರೀ ಶಕ್ತಿ ಸಂಘದ ಮೂಲಕ ಸ್ತ್ರೀಯರು ಸಬಲೀಕರಣವಾಗುತ್ತಿರುವುದುˌ ಕುಡಿತದ ಪರಿಣಾಮˌ ವಾಮಚಾರˌ ಅತ್ತೆ-ಸೊಸೆಯರ ನಡುವಿನ ವೈಷಮ್ಯ ಇತ್ಯಾದಿಗಳು ಅಲ್ಲಿ ಅನಾವರಣಗೊಂಡಿವೆ.

ಪ್ರಶ್ನೆ : ಯಾವುದಾದರೂ ಪ್ರಶಸ್ತಿ-ಪುರಸ್ಕಾರಗಳು ನಿಮಗೆ ಸಂಧಿವೆಯೇ? 

ಹೌದು ಬಂದಿವೆ. ನಾನು ಭಾಗವಹಿಸಿದ ಅನೇಕ ಕವಿಗೋಷ್ಟಿಗಳಿಂದ ಪ್ರಶಸ್ತಿಗಳು ಬಂದಿವೆ. ಬೇಲೂರು ತಾಲ್ಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಪ್ರಶ್ನೆ :  ಮುಂಬರುವ ಕೃತಿಗಳು ಏನಾದರೂ?

" ಬಿರಿದ ಭಾವನೆ' ಎಂಬ ಕಾದಂಬರಿ ಪ್ರಕಟಣೆಗಾಗಿ ಸಿದ್ದಗೊಳ್ಳುತ್ತಿದೆ. ಡಾ|| ಎಂ.ಕೆ. ಪಾಂಡುರಂಗ ಶೆಟ್ಟಿಯವರನ್ನುಕುರಿತ ಜೀವನ ಚರಿತ್ರೆ ಅಚ್ಚಾಗಲೂ ಹೋಗಿದೆ. 
ಅದೇ ರೀತಿ ಚುಟುಕು ಕವನಗಳ - ಸಂಕಲನˌ "ಮನದೊಳಗಿನ ತಲ್ಲಣ" ಎಂಬ ಬಿಡಿ ಲೇಖನಗಳ ಹಾಸನ ಸ್ಪೂರ್ತಿ ಪತ್ರಿಕೆಗೆ ಖಾಯಂ ಅಂಕಣಗಳˌ ಕನ್ನಡ-ನಾಡು ನುಡಿಗೆ ಸಂಬಂಧಿಸಿದ ಬಿಡಿ ಲೇಖನಗಳನ್ನೊಳಗೊಂಡ ಬಿಡಿ ಕೃತಿಗಳು ಸಧ್ಯದಲ್ಲಿಯೇ ಹೊರ ಬರಲಿವೆ.

ಪ್ರಶ್ನೆ :   ಕೊನೆಯದಾಗಿ ವೈವಾಹಿಕ ಜೀವನ ಕುರಿತು

ವೈವಾಹಿಕ ಜೀವನ ತ್ರುಪ್ತಿ ತಂದಿದೆ. ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು ಸಂಸಾರ ಸಾಗಿಸುವ ಮಡದಿ. ಮುದ್ದಾದ ಎರಡು ಮಕ್ಕಳು ನನ್ನ ಪ್ರೀತಿ ಪಾತ್ರದಾರ ತಂದೆ-ತಾಯಿಗಳನ್ನೊಳಗೊಂಡ ಪರಿವಾರ ಸಂತಸ ತಂದಿದೆ.

ಸಂದರ್ಶಕರು : ನಿರಂಜನ್ ಎ ಸಿ ಬೇಲೂರು
                        ಯುವ ಕವಿಗಳು, ಹಾಸನ ಜಿಲ್ಲೆ
                           ಮೊ 7676394414 
ಸಂದರ್ಶನದ ವೀಡಿಯೋಗಾಗಿ :- 👇
https://youtu.be/EUWzvdXh4X4

Post a Comment

0 Comments