ಚಿತ್ರಕಲೆ ಮೂಲಕ ಕೊರೊನಾ ನಿಯಂತ್ರಣ ಜಾಗೃತಿ : ಸಾಮಾಜಿಕ ಜಾಲತಾಣಗಳಲ್ಲಿ ಬೇಲೂರಿನ ಹೆಚ್ ಎಂ ದೀಪಿಕಾ ಅವರು ರಚಿಸಿದ ಚಿತ್ರಕಲೆ ವೈರಲ್.


ಇಡೀ ವಿಶ್ವದಾಧ್ಯಂತ ಮಹಾಮಾರಿಯಾಗಿ ಕಾಡುತ್ತಿರುವ ಕೋವಿಡ್ - 19 ಅಥಾವ ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹತ್ತಾರು ಕಾರ್ಯಕ್ರಮಗಳನ್ನು ರೂಪಿಸಿದೆ . ಇದಕ್ಕೆ ಸಾರ್ವಜನಿಕರು ಕೂಡ ಸೂಕ್ತ ಸ್ಪಂದನೆ ನೀಡುತ್ತಿರುವುದು ವಿಶೇಷವಾಗಿದೆ . ಕೆಲವರು ಕೊರೋನ ವೈರಸ್ ಸೋಂಕಿನ ನಿಯಂತ್ರಣ , ಪರಿಹಾರ ಹಾಗೂ ಕೊರೋನಾ ಹಾಸ್ಯ ಪ್ರಸಂಗಗಳನ್ನು ತಮ್ಮ ಸ್ವ - ರಚಿತ ಕವನಗಳು - ಗೀತೆಗಳು ಮತ್ತು ಲಾವಣಿ - ಚಿತ್ರಕಲೆ ಮೂಲಕ ಗಮನ ಸೆಳೆಯತ್ತಿದ್ದಾರೆ.
ಇಂತಹ ಚಿತ್ರಕಲೆಯಲ್ಲಿ ಕೊರೊನಾ ವೈರಸ್ ಸ್ವಯಂ ನಿಯಂತ್ರಣವನ್ನು ತಮ್ಮ ಚಿತ್ರಕಲೆಯ ಮೂಲಕ ಬೇಲೂರಿನ ದೀಪಿಕಾ ಅಭಿವ್ಯಕ್ತ ಪಡಿಸಿದ್ದು , ಸಾಮಾಜಿಕ ಜಾಲಾತಾಣದಲ್ಲಿ ಜನ ಮನ್ನಣೆ ಪಡೆದಿದೆ .

ವಿಶ್ವ ಪ್ರಸಿದ್ದ ಬೇಲೂರು ಪಟ್ಟಣದ ಚನ್ನೇಗೌಡರ ರಸ್ತೆಯ ನಿವಾಸಿಗಳಾದ  ತಂದೆ ಮಂಜುನಾಥ್ ತಾಯಿ ಮೀನಾಕ್ಷಿ ರವರ ಸುಪುತ್ರಿಯಾದ ಹೆಚ್ . ಎಂ . ದೀಪಿಕಾ ಸದ್ಯ ಹಾಸನ ರಾಜೀವ್ ಇಂಜಿನಿಯರ್ ಕಾಲೇಜಿನಲ್ಲಿ ಬಿಇ ಪದವಿಯನ್ನು ವ್ಯಾಸಂಗ ಮಾಡುತ್ತೆ ರುವ ಈಕೆ ಮೊದಲಿನಿಂದ ತನ್ನ ಓದಿನ ಜೊತೆ - ಜೊತೆಯಲ್ಲಿ ಚಿತ್ರಕಲೆ ಮತ್ತು ಸಾಹಿತ್ಯವನ್ನು ಅಭ್ಯಾಸ ಮಾಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದು , ಸದ್ಯ ಇತ್ತೀಚಿನ ದಿನದಲ್ಲಿ ಜಗತ್ತಿಗೆ ಮಹಾಮಾರಿಯಾಗಿ ದೈತ್ಯ ರೂಪದಲ್ಲಿ ಕಾಡುತ್ತಿರುವ ಕೊರೋನಾ ವೈರಸ್ ಸೋಂಕಿನ ನಿಯಂತ್ರಣಕ್ಕೆ ನಾವುಗಳು ಹೇಗೆ ಸಿದ್ದರಾಗಬೇಕು . ಕೊರೊನಾ ನಿಯಂತ್ರಣದಲ್ಲಿ ನಮ್ಮ ಪಾತ್ರವೇನು ? ಸೋಂಕು ಹತ್ತಿರ ಬರದಂತೆ ಮುನ್ನಚ್ಚರಿಕೆ ಕ್ರಮಗಳು ಬಗ್ಗೆ ತನ್ನ ಚಿತ್ರಕಲೆಯ ಮೂಲಕ ಅಭಿವ್ಯಕ್ತ ಪಡಿಸಿದ್ದು , ಈ ಚಿತ್ರಕಲೆ ಇತ್ತಿಚಿನ ದಿನದಲ್ಲಿ ದಿನದಲ್ಲಿ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಚಿತ್ರಕಲೆ ಮುನ್ನುಡಿ ಬರೆದಿದೆ .

ಬೇಲೂರಿನ ದೀಪಿಕಾ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬೇಲೂರು ಪಟ್ಟಣದ ಖ್ಯಾತ ಶಾಂತಲಾ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಈಕೆ , ಮೊದಲಿನಿಂದಲೂ ಪಠ್ಯದ ಜೊತೆ ಯಲ್ಲಿ ಚಿತ್ರಕಲೆಯ ಮೇಲೆ ತೀವ್ರ ಆಸಕ್ತಿ ಹೊಂದಿದ್ದು , ಶಾಲಾ ಕಾಲೇಜಿನಲ್ಲಿ ನಡೆಯುವ ಚಿತ್ರಕಲೆಯಲ್ಲಿ ಪರಿಸರದ ಜಾಗೃತಿ , ಪರಿಸರ ವಿನಾಶ , ಪರಿಸರ ಸಂರಕ್ಷಣ ಹೀಗೆ ಹೆಚ್ಚು ಪರಿಸರಕ್ಕೆ ಸಂಬಂಧ ಪಟ್ಟ ಚಿತ್ರಕಲೆಗಳನ್ನು ಬರೆದು ಶಾಲೆಗಳಿಗೆ ನೀಡಿದ್ದಾಳೆ . ಅಲ್ಲದೆ ಭಾವಚಿತ್ರಗಳಿಗೆ ಜೀವ ತುಂಬುವ ಶಕ್ತಿ ಹೊಂದಿರುವ ದೀಪಿಕಾ ತನ್ನ ಬಿಇ ವ್ಯಾಸಂಗದ ಬಳಿಕ ನುರಿತ ಚಿತ್ರಕಲೆಯ ಶಿಕ್ಷಕರಿಂದ ಶಿಕ್ಷಣದ ಅನುಭವ ಪಡೆಯುಲು ಮನಸ್ಸು ಮಾಡಿದ್ದಾಳೆ . ಈಕೆ ಪ್ರಯತ್ನಕ್ಕೆ ಫಲ ಲಭಿಸಿ , ಶಿಲ್ಪಕಲಾ ನಾಡಿನಲ್ಲಿ ಚಿತ್ರಕಲೆಯ ಅಪರೂಪದ ವ್ಯಕ್ತಿಯಾಗಿ ಮೂಡಿ ಬರಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ .

ದೀಪಿಕಾ ಅವರಿಗೆ ಸಣ್ಣ ವಯಸ್ಸಿನಿಂದಲೇ ಚಿತ್ರಕಲೆ ಬಗ್ಗೆ ಆಸಕ್ತಿ ಮೂಡಿತ್ತು , ಶಾಲಾ - ಕಾಲೇಜುಗಳಲ್ಲಿ ನಡೆಯುವ ಚಿತ್ರಕಲಾ ಸ್ಪರ್ದೇಗಳು ನನ್ನ ಚಿತ್ರಕಲೆಗೆ ಹೆಚ್ಚಿನ ಜೀವ ತುಂಬಿದೆ . ವಿಶ್ವವನ್ನೇ ತನ್ನ ಕದಂಬಬಾಹುಗಳಿಂದ ತಲ್ಲಣಕ್ಕೆ ಎಡೆ ಮಾಡಿದ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಹತ್ತಾರು ಕ್ರಮ ಅನುಸರಣೆ ಮಾಡಿದ್ದು , ನಾನು ನನ್ನ ಅಭಿವ್ಯಕ್ತ ಮೂಲಕ ಕೊರೋನಾ ಮುನ್ನಚ್ಚರಿಕೆ ಕ್ರಮದ ಬಗ್ಗೆ ಚಿತ್ರಕಲೆ ಬರೆದ ಬಗ್ಗೆ ತಿಳಿಸಿದರು .

ದೀಪಿಕಾ ಸ್ವ - ರಚಿತ ಚಿತ್ರಕಲೆ ನಿಜಕ್ಕೂ ಪ್ರಸಕ್ತ ಸಮಾಜಕ್ಕೆ ಕೈನ್ನಡಿ ಎನ್ನಬಹುದು , ಸರ್ಕಾರ ಕೊರೊನಾ ವೈರಸ್ ನಿಯಂತ್ರಣದ ಕ್ರಮಗಳ ಬಗ್ಗೆ ಕೆಲವರು ಉಡಾಫೆಯಿಂದ ಮಾತನಾಡುವ ಜನರಿಗೆ ಈ ಚಿತ್ರಕಲೆ ಒಂದು ಪಾಠವಾಗಲಿದೆ , ಸರ್ವರ ಹೋರಾಟದಿಂದ ಮಾತ್ರ ಕೊರೊನಾ ನಿಯಂತ್ರಣ ಸಾದ್ಯ , ಈ ನಿಟ್ಟಿನಲ್ಲಿ ಸಾಹಿತಿಗಳು ತಮ್ಮದೆ ಸ್ವ - ರಚಿತ ಕವಿತೆ ಕಾವ್ಯಗಳು , ಹಾಸ್ಯ ಪ್ರಸಂಗದ ಮೂಲಕ ಗಮನ ಸೆಳೆಯುತ್ತಿರುವುದು ನಿಜಕ್ಕೂ ಸಂತಸ ಎಂದರು .

       -ಎ.ಸಿ  ನಿರಂಜನ್ , 
ಯುವ ಬರಹಗಾರ, ಬೇಲೂರು.

Post a Comment

0 Comments