ಮಲೇಷಿಯಾ ನೆಲದಲ್ಲಿ ಭಾರತವನ್ನು ಪ್ರತಿನಿಧಿಸಿ ಥ್ರೋಬಾಲ್ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದ ವಿಭು ಪಟೇಲ್.




ಬೇಲೂರು ಶಿಲ್ಪಕಲೆಗೆ ಮತ್ತು ಸಾಹಿತ್ಯಕ್ಕೆ ಹಿಂದಿನಿಂದಲೂ ರಾಷ್ಟ್ರಕ್ಕೆ ಅಸಾಮಾನ್ಯ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಇಡೀ ವಿಶ್ವ ಬೇಲೂರಿನ ಶಿಲ್ಪಕಲೆಯನ್ನು ಬೆರಗುಗಣ್ಣಿನಿಂದ ನೋಡುತ್ತದೆ.
ಇಂತಹ ಬೇಲೂರಿನ ಮಡಿಲಿನಲ್ಲಿ ಬೆಳೆದ ಹೆಣ್ಣು ಮಗಳೊಬ್ಬಳು  ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಲೂರು ಮತ್ತು ಇಡೀ ದೇಶ  ಹೆಮ್ಮೆ ಪಡುವ ಸಾಧನೆ ಮಾಡಿದ್ದಾಳೆ.

ಆ ಪ್ರತಿಭೆಯ ಹೆಸರು ವಿಭು ಪಟೇಲ್. ಬೇಲೂರು ತಾಲೂಕಿನ ಅಗ್ಗಡಲು  ಗ್ರಾಮದ  ಎ . ಸಿ ಮಹೇಶ್ ಮತ್ತು ಶ್ರೀಮತಿ ಕವಿತಾ ಅವರ ಪುತ್ರಿಯಾಗಿ ಜನಿಸಿ, ಪ್ರಸ್ತುತ ಬೇಲೂರಿನ ಸರ್ವೋದಯ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ವಿಭಾ ಓದಿನ ಜೊತೆಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾಳೆ.‌  ತಾನು ಆರನೇಯ ತರಗತಿಯಲ್ಲಿದ್ದಗಲಿಂದ ಥ್ರೋಬಾಲ್ ಆಟವನ್ನು ಆಡಲು ಪ್ರಾರಂಭಿಸಿ ಅದೇ ವರ್ಷವೇ ಜಿಲ್ಲಾ ಮಟ್ಟದವರೆಗೆ ಸಾಧನೆ ಮಾಡಿದ್ದಾಳೆ. ಅಲ್ಲಿಂದ ಪ್ರಾರಂಭವಾಗಿ   ರಾಜ್ಯ  ಮಟ್ಟಕ್ಕೂ ಆಯ್ಕೆಯಾಗಿದ್ದಾಳೆ. ನಂತರ ರಾಷ್ಟ್ರ ಮಟ್ಟದಲ್ಲಿ ತೋರಿದ ತನ್ನ ಪ್ರತಿಭಾ ಕೌಶಲದಿಂದ  ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಇತ್ತೀಚೆಗೆ ಮಲೇಷಿಯಾದಲ್ಲಿ  ನೆಡೆದ 15 ವರ್ಷದ ಒಳಗಿನ ಥ್ರೋಬಾಲ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಗೆದ್ದು ವಿಜೇತರಾಗಿದ್ದಾರೆ. 

  ಸಾಧನೆಗೆ ಸ್ಪೂರ್ತಿಯಾರೆಂದು ಕೇಳಿದಾಗ ಮೊದಲು
ನನ್ನ ಸಹೋದರಿ ವಿಕ್ಷಾ ಪಟೇಲ್ ರಾಜ್ಯ ಮಟ್ಟದ ಥ್ರೋಬಾಲ್ ಮತ್ತು ಇನ್ನಿತರ ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅಕ್ಕನ ಸಾಧನೆಯನ್ನು ಕಂಡು ತಾನು ಕೂಡ ಕ್ರೀಡಾ ಕ್ಷೇತ್ರದಲ್ಲಿ ಮಿಂಚುವ ಆಸೆಆಗಿತ್ತು  ಅದೇ ನನಗೆ ಸ್ಪೂರ್ತಿಯಾಯಿತು.

ನಮ್ಮ ತಂದೆಯವರ ಕೂಡ ಕ್ರೀಡಾ ಪ್ರೇಮಿಯಾಗಿದ್ದು ಅವರು ಕೂಡ ಗುಂಡು ಎಸೆತ ಮತ್ತು ತಟ್ಟೆ ಎಸೆತ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು.‌ ಅಮ್ಮನ ಪ್ರೋತ್ಸಾಹ ಬಹಳ ಪ್ರಮುಖವಾಗಿತ್ತು. ಅಲ್ಲದೆ ಶಾಲೆಯ ಶಿಕ್ಷಕವೃಂದವರು ಹೆಚ್ಚಾಗಿ ದೈಹಿಕ ಶಿಕ್ಷಕರ ಸಹಕಾರದಿಂದ ಸಾಧನೆಗೆ  ಅವಕಾಶ ದೊರೆಯಿತು.
ಆರನೇಯ ತರಗತಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಲ್ಲದೆ ಆರನೇ ತರಗತಿಯಿಂದ ಏಳನೇ ತರಗತಿಯವರೆಗೆ ಜಿಲ್ಲಾ ಮಟ್ಟ ಮತ್ತು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ, 2018 -19 ನೇ ಸಾಲಿನಲ್ಲಿ ರಾಜ್ಯ ಮಟ್ಟದಲ್ಲಿ ಗೆದ್ದು ರಾಷ್ಟ್ರೀಯ ಮಟ್ಟದ ಥ್ರೋಬಾಲ್ ಪಂದ್ಯದಲ್ಲಿ  ಕಂಚಿನ ಪದಕವನ್ನು ಗೆದ್ದಿರುತ್ತಾರೆ. 

ಇವರ ಸಾಧನೆಯನ್ನು ಗುರುತಿಸಿ 2018 -2019 ನೇ ಸಾಲಿನಲ್ಲಿ SGFI ಥ್ರೋಬಾಲ್ ಕ್ರೀಡಾ ಪಂದ್ಯದಲ್ಲಿ "ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ " ಹಾಗೂ ಗಣರಾಜ್ಯೋತ್ಸವದ ಸಮಾರಂಭದಲ್ಲಿ ಸನ್ಮಾನ ಪುರಸ್ಕಾರಗಳು ದೊರೆತಿವೆ.
ಕ್ರೀಡೆ ಮತ್ತು ಇನ್ನಿತರ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡಿ ನಮ್ಮ ದೇಶ , ರಾಜ್ಯ, ಜಿಲ್ಲೆ, ತಾಲ್ಲೂಕಿನ ಘನತೆಯನ್ನು ಇಡೀ ಜಗತ್ತಿನಾದ್ಯಂತ ಪಸರಿಸಿ ಹಲವಾರು ದಾಖಲೆ ಇವರಿಂದಾಗಲಿ ಎಂದು ಆಶಿಸುತ್ತೆನೆ. .


ಲೇಖನ : ನಿರಂಜನ್ ಎ ಸಿ ಬೇಲೂರು
                ಯುವ ಕವಿಗಳು 


ಶಾಲೆಯ ಪ್ರಾಂಶುಪಾಲರಾರ ನುಡಿ :- 

ನಮ್ಮ ಶಾಲೆಯಲ್ಲಿ ಎಲ್ .ಕೆ.ಜಿ .ಇಂದ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿ ವಿಭು ಪಟೇಲ್ ನ ಆಸಕ್ತಿ , ದೈಹಿಕ ಶಿಕ್ಷಕ ಮೆಹಬೂಬ್ ಸಾಬ್ ಅವರ ಪರಿಶ್ರಮ ಹಾಗೂ ತಂದೆ ತಾಯಿಯವರ ಪ್ರೊತ್ಸಾಹದಿಂದ ಈ ರೀತಿ ಸಾಧನೆ ಮಾಡಿದ್ದಾರೆ, ಇವರಿಗೆ ನಮ್ಮ ಶಾಲೆಯ ಅಡಳಿತ ಮಂಡಳಿ , ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳಿಂದ ಅಭಿನಂದನೆಗಳನ್ನು ಸಲ್ಲಿಸುತ್ತೆವೆ. 

~~ಪ್ರಕಾಶ್.ಪ್ರಾಂಶುಪಾಲರು , ಸರ್ವೂದಯ ವಿದ್ಯಾ ಸಂಸ್ಥೆ, ಬೇಲೂರು

Post a Comment

0 Comments