*ಹಾಸನ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಸಾಹಿತಿ ಮತ್ತು ಹಾಸನವಾಣಿ ಪತ್ರಿಕೆಯ ಸಂಪಾದಕರಾದ ಶ್ರೀಮತಿ ಲೀಲಾವತಿ ಅವರ ಸಂದರ್ಶನ*


ಶ್ರೀಮತಿ ಲೀಲಾವತಿಯವರು ಹಾಸನ ಜಿಲ್ಲೆಯ ಆಲೂರು ತಾಲೂಕಿನ  ಹರಿಹಳ್ಳಿಯಲ್ಲಿ ದಿನಾಂಕ 23/11/1950 ರಲ್ಲಿ ಜನಿಸಿದರು.ಎಂಎ, ಎಲ್ ಎಲ್ ಬಿ ಪದವಿ ಪಡೆದಿರುವ ಇವರು ಸುಮಾರು 45 ವರ್ಷಗಳ ಪತ್ರಿಕಾ ರಂಗದ ಅನುಭವವನ್ನು ಹೊಂದಿದ್ದಾರೆ.ಜನಮಿತ್ರ, ಜನತಾ ಮಾಧ್ಯಮ, ಹಾಸನ ಪ್ರಭ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಕೆಲಸ ಮಾಡಿ ಪ್ರಸ್ತುತ ಹಾಸನ ವಾಣಿ ಪತ್ರಿಕೆಯ ಸಂಪಾದಕರಾಗಿದ್ದಾರೆ. ನಾಡಿನ ಹಲವು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಗೋಕಾಕ್ ಚಳುವಳಿಯಲ್ಲಿ ಕನ್ನಡ ಪರ ಹೋರಾಟ, ಕುದುರೆಮೋತಿ ಸ್ವಾಮೀಜಿ ವಿರುದ್ಧ ಹೋರಾಟ, ಬಳಕೆದಾರರ ಹಕ್ಕಿಗಾಗಿ ಹೋರಾಟ ಹೀಗೆ ಹಲವು ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರು ಹಾಸನವಾಣಿ ಎಡಿಟೋರಿಯಲ್ ನ ಪುಸ್ತಕ, ಅನೇಕ ಪತ್ರಿಕೆಗಳಲ್ಲಿ ಇವರ ಸ್ವರಚಿತ ಕವನಗಳು, ಲೇಖನಗಳು ಪ್ರಕಟವಾಗಿವೆ.
     ಇವರಿಗೆ ಯಶೋದಮ್ಮ ಜಿ ನಾರಾಯಣ ರಾಜ್ಯಮಟ್ಟದ ಪತ್ರಿಕಾ ಪ್ರಶಸ್ತಿ, ರಾಜ್ಯ ಮಟ್ಟದ ಕುವೆಂಪು ಕಾವ್ಯ ಪ್ರಶಸ್ತಿ, ಶ್ರವಣಬೆಳಗೊಳದ ನಿಸ್ವಾರ್ಥ ಸೇವಾ ಪ್ರಶಸ್ತಿ, ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಇನ್ನೂ ಹಲವಾರು ಪ್ರಶಸ್ತಿಗಳು ದೊರಕಿವೆ.

*ತಮ್ಮ ಬಾಲ್ಯ ಜೀವನದ ಅನುಭವಗಳನ್ನು ನಮ್ಮೊಟ್ಟಿಗೆ ಹಂಚಿಕೊಳ್ಳಿ?*
      ನಮ್ಮೂರು ಆಲೂರು ತಾಲೂಕು ಕೆಂಚಮ್ಮನ ಹೊಸಕೋಟೆ ಹೋಬಳಿ ಹರಿಹಳ್ಳಿ. ನನ್ನ ತಂದೆ ಎಚ್ಎಸ್ ವೆಂಕಟನಾರಾಯಣಪ್ಪ ಮತ್ತು ತಾಯಿ ಗೌರಮ್ಮ. ನಾನು ಅವರ ಹಿರಿಮಗಳು. ನಮ್ಮದು ಆ ಕಾಲಕ್ಕೆ ಬಹಳ ಅನುಕೂಲಸ್ಥ ಕುಟುಂಬ. ಸುಮಾರು ಮೂರು ಸಾವಿರ ಎಕರೆ ಗಳಷ್ಟು ತೋಟ ನಮಗಿತ್ತು. 5 ಜನ ಅಜ್ಜಂದಿರು , ಅವರಿಗೆ ಇಬ್ಬರೂ ಹೆಂಡತಿರು ಹಾಗೂ ಬಹಳ ದೊಡ್ಡ ಕುಟುಂಬ ನಮ್ಮದಾಗಿತ್ತು. ಗ್ರಾಮೀಣ ಪ್ರದೇಶವಾಗಿದ್ದರಿಂದ ಕೃಷಿ ಪ್ರಮುಖ ಬದುಕಾಗಿತ್ತು. ನಮ್ಮಲ್ಲಿ ಯಾವುದೇ ಜಾತಿ, ಭೇದ ಇರಲಿಲ್ಲ. ನಮ್ಮ ಮನೆಯ ಕೆಲಸಗಾರರನ್ನು ಕೂಡ  ಬಹಳ
ಪ್ರೀತಿಯಿಂದ ನೋಡಿಕೊಳ್ಳಲಾಗುತ್ತಿತ್ತು. ಅವರಿಗೆಲ್ಲ ನಮ್ಮ ಮನೆಯಲ್ಲಿ ನಿತ್ಯ ಊಟದ ವ್ಯವಸ್ಥೆ ಇರ್ತಿತ್ತು. ಅವರೊಟ್ಟಿಗೆ ಕಾಲ ಕಳೆಯುವುದು ಬಹಳ ಖುಷಿ ಕೊಡ್ತಿತ್ತು.

     *ಆ ಸಂದರ್ಭದಲ್ಲಿ ಅಷ್ಟೊಂದು ಜನ ತಮ್ಮ ಮನೆಯಲ್ಲಿ ಇದ್ದದ್ದರಿಂದ ಹಬ್ಬಹರಿದಿನ ಮದುವೆ ಸಮಾರಂಭಗಳ ಆಯೋಜನೆ ಹೇಗೆ ನಡೆತಿತ್ತು?*
     ಮದುವೆಗಳಲ್ಲಿ ಒಟ್ಟಾಗಿ ಸೇರಿ ಕೆಲಸ ಮಾಡುತ್ತಿದ್ದರು. ಇವತ್ತಿನ ತರಹ ದುಡ್ಡುಕೊಟ್ಟು ಕೆಲಸ ಮಾಡಿಸುವ ಅಗತ್ಯವೇ ಇರಲಿಲ್ಲ. ಏಕೆಂದರೆ ಊರಿನ ಎಲ್ಲ ಜನರು ಸೇರಿ ಕೆಲಸಗಳನ್ನು ಹಂಚಿಕೊಂಡು ಯಾರದೋ ಮನೆಯ ಕೆಲಸ ಆದರೂ ನಮ್ಮ ಮನೆಯ  ಕಾರ್ಯಕ್ರಮ ಅನ್ನೋ ತರ ಜೊತೆಯಾಗಿ ನಿಲ್ತಿದ್ರು. ಇವತ್ತು ಮತ್ತೆ ಅಂತಹ ಕಾಲ ಬಂದರೆ ಬಹಳ ಚಂದ ಅನ್ಸುತ್ತೆ.

   *ನಿಮ್ಮ ತಂದೆಯವರನ್ನ ಇಂಗ್ಲೀಷ್ ಶಾನುಭೋಗರು ಅಂತ ಊರಲ್ಲೆಲ್ಲಾ ಕರೆಯುತ್ತಿದ್ದರಂತೆ ಹೌದಾ?*
    ಹೌದು ನಮ್ಮಪ್ಪ ಇಂಗ್ಲಿಷನ್ನು ಚೆನ್ನಾಗಿ ಬಲ್ಲವರಾಗಿದ್ದರು. ಜಿಲ್ಲಾ ಕಲೆಕ್ಟರ್ ಜಿಲ್ಲೆಯ ಜಮಾಬಂದಿ ಕಾರ್ಯಕ್ಕೆ ನಮ್ಮಪ್ಪನನ್ನು ಕರೆದುಕೊಂಡು ಹೋಗುತ್ತಿದ್ದರು. ಅವರೇ ಇಂಗ್ಲಿಷ್ ಶಾನುಭೋಗರು ಅಂತ ಹೇಳಿ ಹೆಸರು ಇಟ್ಟದ್ದು.ನಮ್ಮ ತಂದೆ ಆ ಹೆಸರಲ್ಲೇ ಹೆಚ್ಚು ಪುರಸ್ಕಾರಕ್ಕೆ ಒಳಗಾದರು.

 *ಕೆಂಚಮ್ಮ ನಿಮ್ಮೂರ ಗ್ರಾಮದೇವತೆ ಅಲ್ಲಿನ ಜಾತ್ರೆಯ ಸಂಭ್ರಮ ಹೇಗಿತ್ತು?*
    ಅಲ್ಲಿ ಮೂರು ರೀತಿಯ ಜಾತ್ರೆ ನಡೆತಿತ್ತು. ಕೆಂಡದ ಜಾತ್ರೆ, ದೊಡ್ಡ ಜಾತ್ರೆ, ಪಾದ ತೂಗೋ ಜಾತ್ರೆ ಅಂತ. ಇವುಗಳಲ್ಲಿ ಊರಿನ ಎಲ್ಲ ಜನರು ಭಾಗವಹಿಸಬೇಕಿತ್ತು. ಇಲ್ಲಿ ಯಾವುದೇ ಜಾತಿ, ಲಿಂಗ, ಭೇದ ಇರಲಿಲ್ಲ. ಸಂಪ್ರದಾಯಗಳು ಈ ಸಂಭ್ರಮದಲ್ಲಿ ಇತ್ತು. ಜಾತ್ರೆ ಅಂದ್ರೆ ನಮಗೆಲ್ಲಾ ಸ್ವರ್ಗಕ್ಕೆ ಒಂದೇ ಗೇಣು  ಅನ್ನುವಷ್ಟು ಖುಷಿ ಇತ್ತು.

*ಹೇಮಾವತಿ ನದಿ ನಿಮ್ಮ ಭಾಗದ ಜನಕ್ಕೆ ಬಹಳ ದೊಡ್ಡ ಕಂಟಕವಾಯಿತಂತೆ ನಿಜವೇ?*
      ಹೌದು ೧೯೬೩ ರಲ್ಲಿ ಸರ್ಕಾರದವರು ಹೇಮಾವತಿ ಜಲಾಶಯ ನಿರ್ಮಾಣ ಮಾಡಲಿಕ್ಕೆ ರೂಪರೇಷೆ ಸಿದ್ಧಪಡಿಸಿದರು. ಆಗ ಹೇಮಾವತಿ ಜಲಾಶಯದ ಹಿನ್ನೀರು ನಮ್ಮ ಹರಿಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ವರೆಗೆ ಬಂತು. ಸಾವಿರಾರು ಎಕರೆ ಭೂಮಿಯನ್ನು ಕಳೆದುಕೊಂಡು. ಅಲ್ಪಸ್ವಲ್ಪ ಜಮೀನು ಇದ್ದವರು ಮನೆಮಠ ಎಲ್ಲ ಬಿಟ್ಟು ಬೀದಿಗೆ ಬಂದರು. ಸರ್ಕಾರದವರು ನಿಮಗೆ ಪರ್ಯಾಯ ಜಾಗ ಕೊಡ್ತೀವಿ, ಪರಿಹಾರದ ಹಣ ಕೊಡ್ತೀವಿ ಅಂತ ಹೇಳಿದ್ರು. ಆದರೆ ಭೂಮಿ ವಶಪಡಿಸಿಕೊಂಡು ಪರ್ಯಾಯವಾಗಿ ಸೂಕ್ತವಾದ ಹಣವನ್ನು, ಜಾಗವನ್ನು  ಇವತ್ತಿಗೂ ಕೊಡಲಿಲ್ಲ. ಇವತ್ತು ಅಲ್ಲಿನ ಜನ ಬಹಳ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಯಾವುದೇ ಹೋರಾಟಗಳು ಪ್ರಯೋಜನಕ್ಕೆ ಬರಲಿಲ್ಲ. ಇದು ಇವತ್ತಿಗೂ ಬಹಳ ಬೇಸರದ ಸಂಗತಿ.

*ನಿಮ್ಮ ವಿದ್ಯಾಭ್ಯಾಸದ ಕುರಿತು ಒಂದಷ್ಟು ತಿಳಿಸಿ?*
 ನಾನು ಪ್ರಾಥಮಿಕ ಶಿಕ್ಷಣವನ್ನು ಕೆಂಚಮ್ಮನ ಹೊಸಕೋಟೆ ಮತ್ತು ಕೊಡ್ಲಿಪೇಟೆಯಲ್ಲಿ ಮುಗಿಸಿದೆ. ನಂತರ ಪ್ರೌಢ ಶಿಕ್ಷಣಕ್ಕೆ ಶಾಲೆ ದೂರವಾಗಿದ್ದರಿಂದ  ನನ್ನನ್ನು ನಮ್ಮಜ್ಜಿ ಮನೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರಕ್ಕೆ ಕಳಿಸಿದರು. ಅಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದೆ. ಮದುವೆಯಾದ ಮೇಲೆ ಬಹಳ ವರ್ಷಗಳ ನಂತರ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡೆ.

*ನಿಮ್ಮ ವೈವಾಹಿಕ ಜೀವನದ ಬಗ್ಗೆ ತಿಳಿಸಿ?*
  ನನಗೆ 15ನೇ ವರ್ಷಕ್ಕೆ ಸಕಲೇಶಪುರದ ಬಿ.ಎಸ್ . ಬಾಲಸುಬ್ರಹ್ಮಣ್ಯ ಅವರಿಗೆ ಮದುವೆ ಮಾಡಿಕೊಟ್ಟರು. ನನ್ನ ತಾಯಿ ಬಾಲ್ಯದಲ್ಲಿ ಇದ್ದಾಗಲೇ ತೀರಿಹೋಗಿದ್ದರು. ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ರಿಂದ ಊರಿನ ಹಿರಿಯರು ಸೇರಿ ಅವರೇ ದುಡ್ಡು ಹಾಕಿ ಮದುವೆ ಮಾಡಿದರು.ನನ್ನ ಗಂಡನ ಮನೆಯೂ ನಮ್ಮ ಕುಟುಂಬದಂತೆ ತುಂಬು ಕುಟುಂಬ.

*ನಿಮ್ಮ ಗಂಡನಿಗೆ ನೀವೆ ಪಾಠ ಹೇಳಿ ಅವರನ್ನು ಮೇಷ್ಟ್ರು ಮಾಡಿದರಂತೆ ನಿಜಾನಾ?*
    ಮದುವೆಯಾಗುವ ಹೊತ್ತಿಗೆ ನನ್ನ ಗಂಡ ಪಿಯುಸಿ ಮುಗಿಸಿದರು. ಆಮೇಲೆ ಅವರು ನನಗೆ ನೀನು ಪಾಠ ಹೇಳು ಅಂತ ಹೇಳಿದ್ರು. ನಾನು ಪಾಠ ಓದುತ್ತಿದ್ದೆ, ಅವರು ಅದನ್ನು ಕೇಳಿಸಿಕೊಳ್ಳುತ್ತಾ ಡಿಗ್ರಿ, b.ed ಎಲ್ಲಾ ಮುಗಿಸಿಬಿಟ್ಟರು. ಆದರೆ ನಾನು ಅಷ್ಟೆಲ್ಲ ಪಾಠ ಹೇಳಿ ನಾನು ಓದಬೇಕು ಅನ್ನುವ ಯೋಚನೆ ಬರಲಿಲ್ಲ. ಆಮೇಲೆ ಎಂಎ ಮತ್ತು l.l.b. ಯನ್ನು  ಮುಗಿಸಿಕೊಂಮ್ಮ ಪ್ರವೇಶ ಹೇಗಾಯಿತು?*
ಮಕ್ಕಳ ವಿದ್ಯಾಭ್ಯಾಸ ಸಕಲೇಶಪುರದಲ್ಲಿ ಇದ್ದಾಗ ಸ್ವಲ್ಪ ಸವಾಲಾಗಿತ್ತು. ನನ್ನ ನಾದಿನಿ ಮೈದುನ ತಮ್ಮ ಇವರಿಗೆಲ್ಲಾ ವಿದ್ಯಾಭ್ಯಾಸ ಆಗಬೇಕಿತ್ತು. ಇವರನ್ನು ಓದಿಸಬೇಕು ಅನ್ನೋ ಆಸೆ ನನಗೆ ಬಂತು. ಹಾಗಾಗಿ ನಾನು ಹಾಸನಕ್ಕೆ ಬಂದೆ. ಜನಮಿತ್ರ ಸುದ್ದಿ ಮಾಧ್ಯಮದಲ್ಲಿ ಪತ್ರಕರ್ತೆಯಾಗಿ ಕೆಲಸಕ್ಕೆ ಸೇರಿಕೊಂಡೆ. ನಾನು ಪತ್ರಿಕಾ ರಂಗಕ್ಕೆ ಪ್ರವೇಶ ಮಾಡಲಿಕ್ಕೆ ಕಾರಣ ಪ್ರಸ್ತುತ ಹಾಸನ ಮಾಧ್ಯಮ ಪತ್ರಿಕೆಯ ಸಂಪಾದಕರಾದ ಕೆ ಶೇಷಾದ್ರಿ. ಅವರು ಅವತ್ತು ಜನಮಿತ್ರ ಪತ್ರಿಕೆಗೆ ಕೆಲಸಕ್ಕೆ ಸೇರಿಸಿದ್ದಕ್ಕೆ ನಾನು ಇವತ್ತಿನವರೆಗೂ ಪತ್ರಿಕಾರಂಗದಲ್ಲಿ ತೊಡಗಿಕೊಂಡಿದ್ದೇನೆ. ನಂತರ ಕನ್ನಡಪ್ರಭ ಪತ್ರಿಕೆಯಲ್ಲಿ ಉಪ ಸಂಪಾದಕಿಯಾಗಿ ಕೆಲಸ ಮಾಡಿದ್ದೇನೆ.

  *ಕುಟುಂಬ ಸಮಾಲೋಚನಾ ಕೇಂದ್ರವನ್ನ ಸ್ಥಾಪಿಸಿದ್ರಿ, ಅದರ ಅನುಭವ ಹೇಗಿತ್ತು?*
ಅದನ್ನು ನಾನು ಮತ್ತೆ ಬಾನು ಮುಸ್ತಾಕ್ ಇಬ್ಬರೂ ಸೇರಿ ಸ್ವಂತ ಹಣದಲ್ಲಿ ನಡೆಸುತ್ತಿದ್ದು. ಆ ಸಂದರ್ಭದಲ್ಲಿ ಪೋಲೀಸಿನವರು ಕೆಲವು ಮನೆ ಬಿಟ್ಟು ಬಂದ ಹೆಣ್ಣುಮಕ್ಕಳನ್ನು ನಮಗೆ ಒಪ್ಪಿಸುತ್ತಿದ್ದರು. ನಂತರ ಮನೆಯವರು ಬಂದು ಪೋಲೀಸಿನವರಿಗೆ ನಾಪತ್ತೆ ಪ್ರಕರಣ ದಾಖಲಿಸಿದಾಗ ನಮ್ಮತ್ರ ಹೆಣ್ಣುಮಕ್ಕಳನ್ನು ತಂದುಬಿಟ್ಟ ಪೊಲೀಸ್ ನವರೇ ನಮ್ಮ ಮೇಲೆ ಕೇಸ್ ಹಾಕಿ ಸ್ಟೇಷನ್ನಿಗೆ ಕರ್ಕೊಂಡು ಹೋಗ್ತಿದ್ರು. ಇಂತಹ ಘಟನೆಗಳು ಬಹಳ ನಡೆದಿದೆ.

 


*ಸಂದರ್ಶಕರು:*
ಸುಪ್ರೀತ್ ರಾಜಶೇಖರ್ ಮೊಗಸಾವರ.
ನಿರಂಜನ್ ಎ ಸಿ ಬೇಲೂರು.

Post a Comment

0 Comments