ನಿರಂಜನ್ ಎ ಸಿ ಬೇಲೂರು ಅವರ ಕಿರುಪರಿಚು


ಹೆಸರು : ನಿರಂಜನ್ ಎ ಸಿ ಬೇಲೂರು
ವಯಸ್ಸು :- ೨೨ ವರ್ಷ
ಹುಟ್ಟಿದ ದಿನಾಂಕ :  ೨೯-೧೦-೨೦೦೦
ತಂದೆಯ ಹೆಸರು : ಚಂದ್ರಶೇಖರ್ ಎ ಸಿ
ತಾಯಿಯ ಹೆಸರು : ಉಮಾದೇವಿ
ವಿಳಾಸ : ಚಂದ್ರಶೇಖರ್ ಎ ಸಿ s/o ನಿರಂಜನ್ ಎ ಸಿ ಬೇಲೂರು
ಕಣಗುಪ್ಪೆ ಗ್ರಾಮ, ಅನುಘಟ್ಟ ಅಂಚೆ , ಅರೇಹಳ್ಳಿ ಹೋಬಳಿ, ಬೇಲೂರು ತಾಲ್ಲೂಕು, ಹಾಸನ ಜಿಲ್ಲೆ - 573115
ದೂರವಾಣಿ ಸಂಖ್ಯೆ : 7676394414

ಸಂಪೂರ್ಣ ಪರಿಚಯ
.....................................

ಬಹಳ ಪ್ರಾಚೀನ ಕಾಲದಿಂದಲೂ ಸಾಹಿತ್ಯ, ಕಲೆ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ಉನ್ನತ ಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡ ಊರು ನಮ್ಮ ಬೇಲೂರು. ಬೇಲೂರು ಕೃಷ್ಣಮೂರ್ತಿ, ವಿಜಯಾ ದಬ್ಬೆ, ಶ್ರೀವತ್ಸ ವಟಿ, ನವಾಬ್ ಪಾಷ ಮುಂತಾದ ಹಿರಿಯರನ್ನು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ಕೊಟ್ಟಿದೆ, ನಮ್ಮ ಬೇಲೂರು. ಇತ್ತೀಚಿನ ದಿನಗಳಲ್ಲಿ ಬೇಲೂರಿನ ಕಿರಿಯ ವಯಸ್ಸಿನ ಯುವ ಕವಿಗಳ ಬಗ್ಗೆ ನೋಡ ಹೊರಟರೆ , ನಮಗೆ ಮೊದಲು ನೆನಪಾಗುವ ಹೆಸರು 'ನಿರಂಜನ್ ಎ.ಸಿ'.
ಕನ್ನಡ ಸಾಹಿತ್ಯವೆಂದರೇ ಮೂಗು ಮುರಿಯುವ, ಕನ್ನಡ ಭಾಷೆಯ ಬಗೆಗೆ ಅಸಡ್ಡೆ ಹೊಂದಿರುವ ಎಷ್ಟೋ ತರುಣರಿರುವ ಈ ಕಾಲದಲ್ಲಿಯೂ ಹದಿನೆಂಟರ ಹರೆಯದ ಈ ಹುಡುಗನ ಸಾಹಿತ್ಯಾಸಕ್ತಿ ನಿಜವಾಗಿಯೂ ಪ್ರಶಂಸಾರ್ಹವಾದುದು.
ಬೇಲೂರು ತಾಲ್ಲೂಕಿನ ಕಣಗುಪ್ಪೆ ಗ್ರಾಮದ ಕಾಫಿ ಬೆಳೆಗಾರರಾದ ಚಂದ್ರಶೇಖರ್ ಹಾಗೂ ಉಮಾ ದಂಪತಿಗಳ ಪುತ್ರನಾಗಿ ಹುಟ್ಟಿ ವಿದ್ಯಾಭ್ಯಾಸಕ್ಕಾಗಿ ಬೇಲೂರಿಗೆ‌ ಬಂದು ಈಗ ಬೇಲೂರಿನಲ್ಲೇ ವಾಸವಾಗಿರುವ ಇವರು ತನ್ನ ಸುತ್ತಲಿನ  ಪರಿಸರದೊಂದಿಗೆ ತನ್ನ ಅನುಭವಗಳನ್ನು ಹೋಲಿಸಿಕೊ೦ಡು ತನ್ನ ಅಂಕು - ಡೊಂಕುಗಳನ್ನು ತಿದ್ದಿ ಕೊಳ್ಳುವ ಹಾಗೆಯೇ ಸಾಹಿತ್ಯ  ಕೃಷಿಯ ಮೂಲಕ ಸಮಾಜವನ್ನು ತಿದ್ದುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದಾರೆ. ಚುಟುಕು ಸಾಹಿತ್ಯ ಹಾಗೂ ಕವನಗಳನ್ನು ಹೆಚ್ಚಾಗಿ ಬರೆಯುವ ಇವರ ಬರಹಗಳಲ್ಲಿ ಇವರ ಸಾಮಾಜಿಕ ಕಳಕಳಿಯನ್ನು ಕಾಣಬಹುದು. ವಿವಿಧ ಪ್ರಕಾರಗಳಲ್ಲಿ  ಬರೆಯಲು ಪ್ರಯತ್ನಿಸುತ್ತಿರುವ ಇವರು , ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತವಿರುವ ವಿಭಿನ್ನ ಸಾಹಿತ್ಯ ಪ್ರಕಾರಗಳಾದ ಹಾಯ್ಕು , ಗಜಲ್ ಮುಂತಾದವುಗಳ ಪ್ರಯೋಗದಲ್ಲಿಯೂ ಕೂಡಾ ತಮ್ಮನ್ನು ತಾವು ತೊಡಗಿಸಿಕೊಂಡು, ಹೊಸ ರೀತಿಯ ಸಾಹಿತ್ಯದಲ್ಲಿನ ತಮ್ಮ ಆಸಕ್ತಿಯನ್ನು ತೋರ್ಪಡಿಸಿದ್ದಾರೆ. "ಬೆಳೆಯುವ ಸಿರಿ ಮೊಳಕೆಯಲ್ಲಿ " ಎನ್ನುವಂತೆ  ಈಗಾಗಲೇ  ಹಲವಾರು ರಾಜ್ಯ ಮಟ್ಟದ ಪುಸ್ತಕಗಳಲ್ಲಿ  ಕವಿತೆಗಳು ಈಗಾಗಲೇ  ಹೊರಹೊಮ್ಮಿದೆ.  ತಮ್ಮ ಲೇಖನಿಯಿಂದ - ಕಾವ್ಯ ಜಗತ್ತಿಗೆ ಅಂಬೆಗಾಲಿಡುವ ಪ್ರಯತ್ನ ಮಾಡುತಿದ್ದಾರೆ .
ಸಾಹಿತ್ಯದಲ್ಲಿ ಅತೀವವಾದ ಆಸಕ್ತಿ ಹೊಂದಿರುವುದಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳ ಮೂಲಕ ಯುವಜನತೆಯಲ್ಲಿ , ತನ್ನ ಮಿತ್ರ ಬಳಗದಲ್ಲಿ ಸಾಹಿತ್ಯದ ಬಗೆಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಾ ಈ ದಿಶೆಯಲ್ಲಿ  ಯಶಸ್ವಿಯಾಗಿರುತ್ತಾರೆ.ನಿಮ್ಮಲ್ಲಿನ ಸಾಹಿತ್ಯದ ಒಲವಿಗೆ ಸ್ಫೂರ್ತಿ ಯಾರೆಂದು ಕೇಳಿದಾಗ ತನ್ನ ತಾಯಿ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಎಂದು ಹೇಳುವ ಇವರು ಬಹಳ ಸರಳ ವ್ಯಕ್ತಿ ಹಾಗೂ ಸ್ನೇಹಜೀವಿ.
ಇವರ ಹೊಸ ಪ್ರಯೋಗವೆಂದರೆ ಕವಿ ಕಾವ್ಯ ಸುಧೆ ಎಂಬ ತನ್ನದೇ ಆದ ಕಿರು ಬಳಗವನ್ನು ಹೊಂದಿದ್ದು. ಇದರಲ್ಲಿ ವಿಶೇಷವಾಗಿ ಅನೇಕ ಕಿರಿಯ ಹಾಗೂ ಹಿರಿಯ ಕವಿಗಳ ಪರಿಚಯವನ್ನು ಸಂದರ್ಶಿಸಿ  ಪರಿಚಯಿಸುವ ಕಾರ್ಯವನ್ನು ಸಹ ಮಾಡುತಿದ್ದಾರೆ.ಹೊಸ ಹೊಸ ರೀತಿಯ ಕನ್ನಡ ಸಾಹಿತ್ಯದ ಆಲೋಚನೆ ಇವರದ್ದಾಗಿರುತ್ತದೆ.

ಇನ್ನು ಇವರ ಬರಹಗಳ ಕುರಿತು ಹೇಳುವುದಾದರೆ,ಎಲ್ಲಾ ಹದಿಹರೆಯದ ಯುವಕರ  ವಯೋ ಸಹಜವಾದ ಪ್ರೀತಿಯ ಸುಳಿ , ಪ್ರೇಮದ ಆಕರ್ಷಣೆ , ಕನಸು ಕಾಣುವ ಪರಿ , ನಿರುತ್ಸಾಹ ,ನೋವು , ಜಿಗುಪ್ಸಾಮನೋಭಾವ ಮುಂತಾದವುಗಳನ್ನು ಇವರ ಕವಿತೆಳಲ್ಲಿ ಕಾಣಬಹುದು.
ಇವರು ಜಿಲ್ಲೆ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿರುವವರು. ತನ್ನ ವಿದ್ಯಾಭ್ಯಾಸದ ಜೊತೆ ಸಾಹಿತ್ಯ , ಛಾಯಾಗ್ರಹಣವನ್ನು ಮಾಡುವವರು. ಛಾಯಾಗ್ರಹಣದಲ್ಲಿಯೂ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಸಾಹಿತ್ಯ ಸೇವೆಯನ್ನು ಪರಿಗಣಿಸಿ ಸಂಘ ಸಂಸ್ಥೆಗಳಲ್ಲಿ " ಕರುನಾಡ ಕುವೆಂಪು ರತ್ನ ಪ್ರಶಸ್ತಿ "  " ಕಾವ್ಯ ಶ್ರೀ ಪ್ರಶಸ್ತಿ " " ಸಿರಿಗನ್ನಡಂ ಸಾಹಿತ್ಯ ರತ್ನ ಪ್ರಶಸ್ತಿ " ಮತ್ತು ಸಿರಿಗನ್ನಡಂ ರಾಜ್ಯೋತ್ಸವ ರತ್ನ ಪ್ರಶಸ್ತಿ , ಪ್ರತಿಭಾ ಮಾಣಿಕ್ಯ ಪ್ರಶಸ್ತಿ , ಯುವ ಸಾಹಿತ್ಯ ಪ್ರಶಸ್ತಿ ಮತ್ತು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿಯೂ ಸಹ ಸಂಘಕರಾಗಿಯೂ ಕಾರ್ಯನಿರ್ವಸುತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಾಸನ ಜಿಲ್ಲಾ ಕವಿವೃಕ್ಷ ಬಳಗ ಜಿಲ್ಲಾಧ್ಯಕ್ಷರಾದ ನಂತರ  ಶಿಲ್ಪ ಕಲೆಗಳ ತವರೂರಾದ ಬೇಲೂರಿನಲ್ಲಿ ‌ಕವಿವೃಕ್ಷ ಸಾಹಿತ್ಯ ಸಂಭ್ರಮವನ್ನು ಯಶಸ್ವಿಯಾಗಿ ನೆರವೇರಿಸಿರುವುದು ಚಿಕ್ಕ ವಯಸ್ಸಿನಲ್ಲೇ ಅಧ್ಬುತ ಸಾಧನೆಯನ್ನು ಮಾಡಿ ಮಾಡಿದ್ದಾರೆ.
ರಕ್ತ ಅಂದರೆ ಎದರುವ ಯುವ ಜನತೆ ಆದೇಷ್ಟೂ ಜನರಿಗೆ ರಕ್ತ ತನ್ನಿಂದ ಕೊಡಲಾದೆ ಇದ್ದರು ಬೇರೆಯವರಿಂದ ರಕ್ತ ದಾನವನ್ನು ಮಾಡಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.



ಮಂಡ್ಯದ ಕನ್ನಡಾಂಬೆ ದಿನ ಪತ್ರಿಕೆ ಹಾಗೂ ಜೀಶಂಪ ಸಾಹಿತ್ಯ ವೇದಿಕೆವತಿಯಿಂದ ಆಯೋಜಿಸಿದ ಕವಿ ಕಾವ್ಯ ಮೇಳದಲ್ಲಿ "ರಾಜ್ಯ ಮಟ್ಟದ ಕಾವ್ಯ ಶ್ರೀ ಪ್ರಶಸ್ತಿ " ಪಡಿದ ಕ್ಷಣ 


ರಾಜ್ಯ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ವೇದಿಕೆ ಚಿತ್ರದುರ್ಗ ಇವರ ರಾಜ್ಯ ಮಟ್ಟದ ಪ್ರಥಮ ಸಮ್ಮೇಳನದಲ್ಲಿ "ರಾಜ್ಯ ಮಟ್ಟದ ಕರುನಾಡ ಕುವೆಂಪು ರತ್ನ ಪ್ರಶಸ್ತಿಯನ್ನು" ಪಡೆದ ಕ್ಷಣ.


ಸಮಾಜ ಕಲ್ಯಾಣ ಸಂಸ್ಥೆ , ಬೆಂಗಳೂರು ಇವರ ವತಿಯಿಂದ "ರಾಜ್ಯ ಮಟ್ಟದ ಸಿರಿಗನ್ನಡ ಸಾಹಿತ್ಯ ರತ್ನ ಪ್ರಶಸ್ತಿ " ಯನ್ನು ಪಡೆದ ಕ್ಷಣ. 

ಕಲಾವಿದರ ರಕ್ಷಣಾ ವೇದಿಕೆ, ಬೆಂಗಳೂರು ಇವರ ವತಿಯಿಂದ "ರಾಜ್ಯ ಮಟ್ಟದ ಸಿರಿಗನ್ನಡಂ ರಾಜ್ಯೋತ್ಸವ ರತ್ನ ಪ್ರಶಸ್ತಿ "ಯನ್ನು ಪಡೆದ ಕ್ಷಣ


೨೦ ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಬೇಲೂರಿನ ನಿವೃತ್ತ ಯೋಧರಾದ ವೀರಭದ್ರಪ್ಪ ಅವರನ್ನು ಸನ್ಮಾನಿಸಿದ ಕ್ಷಣ.


ಬೇಲೂರಿನ ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ೬೩ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೆಂಪೇಗೌಡ ವೃತ್ತ ಬಳಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿದ ಕ್ಷಣ.


ಲೇಖಕ ಪೂರ್ಣಚಂದ್ರ ತೇಜಸ್ವಿಯವರ ಅಂಬಾರಿ. 



ಚಿಕ್ಕಮಗಳೂರಿನ ದೇವಿರಮ್ಮ( ಬಿಂಡಿಗಮ್ಮ) ನ ಬೆಟ್ಟದಲ್ಲಿ ಸ್ವಚ್ಛಗೊಳಿಸಿರುವುದು.


ಸಕಲೇಶಪುರದಲ್ಲಿ ನೆಡೆದ  ಸಾಹಿತ್ಯ ಚಿಗುರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣ.

ವಿವಿಧ ಪತ್ರಿಕೆಗಳಲ್ಲಿ ಪರಿಚಯದ ಲೇಖನಗಳು








   

Post a Comment

0 Comments