ಪ್ರವಾಸಾನುಭವ : ೧ ಪಂಚೆ ಧರಿಸಿ ದೇಗುಲ ಭೇಟಿ

 ಪ್ರವಾಸಾನುಭವ : ೧ 

~ ನಿರಂಜನ್ ಎ.ಸಿ ಬೇಲೂರು

 ಪಂಚೆ ಧರಿಸಿ ದೇಗುಲ ಭೇಟಿ

ನಾವೆಲ್ಲರೂ ಪ್ರಕೃತಿಯ ಸೌಂದರ್ಯವನ್ನು ನಾವು ನೋಡುವ ರೀತಿಯಲ್ಲಿ ಆನಂದಿಸಬಹುದು ! ಪ್ರತಿಯೊಂದು ಬಾರಿಯೂ ನಾನು ಸಂಕೇತ್ , ಧನ್ ರಾಜ್ ಟ್ರಿಪ್ ಪ್ಲಾನ್ ಮಾಡಿದಾಗಲೂ, ಕೆಲಸಗಳ ಒತ್ತಡದಿಂದ ಎಲ್ಲೂ ಕೂಡ ಹೋಗುವುದಕ್ಕೆ ಆಗುತ್ತಿರಲಿಲ್ಲ.‌ ಏನಾದರೂ ಆಗಲಿ ಬಿಡು ಎಲ್ಲಾದರೂ ಹೋಗಲೇಬೇಕೆಂಬ ಹಂಬಲದಿಂದ 2024 ರ ಕೊನೆಯ ದಿನ ಪ್ಲಾನ್ ಮಾಡಿಕೊಂಡೆವು , ಆಗಿನ್ನು ದಿನಾಂಕ ನಿಗದಿಯಾಗಿರಲಿಲ್ಲ , ನಾವೇನು ಇವಾಗ ಬಿಡುವು ಮಾಡಿಕೊಳ್ಳುತ್ತೇವೆ ಆದರೆ ಬೇರೆಯವರನ್ನೆಲ್ಲ ಕರೆದರೆ ಬರ್ತಾರಾ ಎಂಬ ಪ್ರಶ್ನೆ ಉಂಟಾಯಿತು ? 


ಅದ್ಯಾವ ಕಾಕತಾಳೀಯೋ ಗೊತ್ತಿಲ್ಲ  2025 ರ ಮೊದಲ ವಾರ, ಸ್ನೇಹಿತ ಸಂಕೇತ್ ಕೂಡ ತನ್ನ ಸಹೋದ್ಯೋಗಿಗಳೊಂದಿಗೆ ಪ್ರವಾಸದ ತಯಾರಿ ಬಗೆಗೆ ಚರ್ಚಿಸಿ , ಎಲ್ಲಾ ರೂಪರೇಷೆಗಳನ್ನು ಮಾಡಿಕೊಂಡು , ಲೋ ಕವಿ ನಿನಗೆ ಧನರಾಜ್‌ಗೆ   ಇಬ್ಬರಿಗೂ ಕೂಡ ಅಭ್ಯಂತರ ಇಲ್ಲ ಅಂದರೆ ನೀವು ಇಬ್ಬರೂ ಕೂಡ ನನ್ನ ಸಹೋದ್ಯೋಗಿಗಳೊಂದಿಗೆ ಪ್ರವಾಸ ಬರುವುದಕ್ಕೆ‌ ಒಪ್ಪಿಗೆ ಇದೆಯೇ ಎಂದು ಕೇಳಿದ ! ಅದಕ್ಕೆ ನಾನು ಯಾರು ಬರ್ತಾರೋ ಎಂದು ಪ್ರಶ್ನಿಸಿದೆ , ನಿನಗೆ ಎಲ್ಲ ಗೊತ್ತಿರೋರೇ ಇರ್ತಾರೆ ಬಾ ಹೊರಡು ಎಂದನು. ತಕ್ಷಣವೇ ಧನರಾಜ್ ನಿಗೆ ಕರೆ ಮಾಡಿ , ಸಂಕೇತ್ ಫೋನ್ ಮಾಡಿದ್ನಾ? ಏನ್ ಮಾಡೋಣ ಎಂದು ಕೇಳಿದೆ ಹೋಗಿ ಬರೋಣ ಬಾ ಎಂದು ಅವನು ಹೇಳಿದನು. ಇವರಿಬ್ಬರೂ ಜೈ ಅಂದ ಮೇಲೆ ನಾನು ಕೂಡ ಜೈ ಎಂದು ಮನೆಯಲ್ಲಿ ಮಾಹಿತಿ ತಿಳಿಸಿದೆ.




ಮೊದಲ ದಿನ ತಾಯಿ ಹಾಸನಾಂಬೆ ದೇಗುಲದ ಮುಂಭಾಗ ನಮ್ಮ ರಥಕ್ಕೆ ಪೂಜೆ ಸಲ್ಲಿಸುತ್ತಾ ಎಲ್ಲರನ್ನೂ ಕೂಡ ಪರಿಚಯ ಮಾಡಿಕೊಂಡೆವು ಅಲ್ಲಿ ಸಿಕ್ಕಂತಹ ಸ್ನೇಹಿತರೆಂದರೆ ಉಪನ್ಯಾಸಕರುಗಳಾದ ಗಿರೀಶ್ , ಧನಂಜಯ್ , ದೀಪಕ್, ಗೀತಾ , ಡಾ. ಮಂಜೇಶ್ ಡಾ.ಸುನಿತಾ ಹಾಗೂ ಗೀತರವರ ಸ್ನೇಹಿತರುಗಳಾದ ಸಹಾನ , ನಮೀತ ಮತ್ತು ನಾವು ಮೂವರು.


ಮೊದಮೊದಲಿಗೆ ಮುಜುಗರದಿಂದ ಪ್ರಾರಂಭವಾದ ಮಾತುಗಳು , ಮತ್ತಷ್ಟು ಬಲತುಂಬಿ ಮಾತನ್ನೇ ನಿಲ್ಲಿಸದಾಗದಷ್ಟು ಮಾತುಗಳು , ಮನರಂಜನೆಗಳು ಶುರುವಾಗಿ , ನಾವೆಲ್ಲರೂ ಒಂದು ಎಂಬ ಭಾವನೆ ಮೊಳಗಿತು,

ಹಾಸನದಿಂದ ರಾತ್ರಿ ಇಡಿ ಸುಮಾರು 362 ಕಿಲೋಮೀಟರ್ ದೂರದಲ್ಲಿರುವ ಪುಣ್ಯಕ್ಷೇತ್ರ ಗೋಕರ್ಣಕ್ಕೆ ಚಲಿಸಿದೆವು , 

ದೇಗುಲದ ಸಮೀಪವಿರುವ ಒಂದು ವಸತಿಯಲ್ಲಿ ಸ್ನಾನ ಮಾಡಿಕೊಂಡು ಪಂಚ ಧರಿಸಿ ದೇವರ ದರ್ಶನಕ್ಕೆ ಹೊರಟೆವು.

ಸನಾತನ ಸಂಸ್ಕೃತಿ ಪ್ರಕಾರ ದೇಗುಲಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಪುರುಷರು ಕೂಡ ಪಂಚೆಯನ್ನು ಧರಿಸಿ , ಮಹಿಳೆಯರು ಸೀರೆಯನ್ನು ಧರಿಸಿ ದೇಗುಲಕ್ಕೆ ಭೇಟಿ ನೀಡಬೇಕು.


ದೇವಾಲಯದ ಮಾಹಿತಿ : 

ಮಹಾಬಲೇಶ್ವರ ದೇವಸ್ಥಾನವು ದಕ್ಷಿಣ ಭಾರತದ ಪ್ರಮುಖ ಯಾತ್ರಾಸ್ಥಳವಾಗಿದ್ದು, ಇಲ್ಲಿ ಹಿಂದೂಗಳು ಆತ್ಮಲಿಂಗ ಅಥವಾ ಶಿವನ ಪ್ರಾಣಲಿಂಗವನ್ನು ಪೂಜಿಸಲು ಬರುತ್ತಾರೆ. ಈ ದೇವಾಲಯವು ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ಸುಂದರವಾಗಿ ನಿರ್ಮಿಸಲ್ಪಟ್ಟಿದೆ ಮತ್ತು ಹಿಂದೂ ಸಂಸ್ಕೃತಿಯಲ್ಲಿ ಬಲವಾಗಿ ಮಹತ್ವದ್ದಾಗಿದೆ.


ಗೋಕರ್ಣದ ಮಹಾಬಲೇಶ್ವರ ದೇವಾಲಯವು ಹಿಂದೂಗಳ ಏಳು ಮುಕ್ತಿಶೆತ್ರಗಳಲ್ಲಿ ಒಂದಾಗಿದೆ, ಅಲ್ಲಿ ಅವರು ಅಂತಿಮ ವಿಧಿಗಳನ್ನು ಮಾಡಲು ಬರುತ್ತಾರೆ. ನೀವು ಪ್ರತಿ ಬಾರಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅನೇಕ ಜನರನ್ನು ನೀವು ಗಮನಿಸಬಹುದು.

ಇದು ಸಮಯದ ಪರೀಕ್ಷೆಯನ್ನು ಹೊಂದಿದೆ ಮತ್ತು 4 ನೇ ಶತಮಾನದ AD ಯಿಂದ ಪ್ರಮುಖ ಪೂಜಾ ಸ್ಥಳವಾಗಿದೆ. ಇದು ಬಿಳಿ ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲ್ಪಟ್ಟಿದೆ ಮತ್ತು ದೇವಾಲಯದ ಆವರಣದಲ್ಲಿ ಸುಂದರವಾದ ಗೋಪುರಗಳನ್ನು ಹೊಂದಿದೆ. ಈ ದೇವಾಲಯವನ್ನು ಕದಂಬ ರಾಜವಂಶದ ಪ್ರಸಿದ್ಧ ದೊರೆ ಮಯೂರಶರ್ಮ ನಿರ್ಮಿಸಿದನು.


1500 ವರ್ಷಗಳಷ್ಟು ಹಳೆಯದಾದ ಶಿವನ ಚಿತ್ರವು ಚೆನ್ನಾಗಿ ಬೇರೂರಿದೆ ಮತ್ತು ದೇವಾಲಯದ ಗೋಡೆಗಳಲ್ಲಿ ಸುಂದರವಾಗಿ ಕೆತ್ತಲಾಗಿದೆ. ಬೃಹತ್ ಆತ್ಮಲಿಂಗವು ಮಹಾಬಲೇಶ್ವರ ದೇವಸ್ಥಾನದ ಶಾಲಿಗ್ರಾಮ ಪೀಠದೊಳಗೆ ಸುತ್ತುವರಿದಿದೆ.

ದಂತಕಥೆಯ ಪ್ರಕಾರ, ಇದು ಭಗವಾನ್ ಶಿವನಿಂದ ರಾವಣನಿಗೆ ಉಡುಗೊರೆಯಾಗಿದ್ದಾಗ, ಇತಿಹಾಸವು ಅನಿರೀಕ್ಷಿತ ಘಟನೆಗಳನ್ನು ತೆಗೆದುಕೊಂಡಿತು ಮತ್ತು ಆತ್ಮಲಿಂಗವು ಗೋಕರ್ಣದಲ್ಲಿ ನೆಲದಲ್ಲಿ ದೃಢವಾಗಿ ನೆಲೆಗೊಂಡಿತು.

ರಾವಣನು ತನ್ನ ಸಂಪೂರ್ಣ ಶಕ್ತಿಯಿಂದ ಕಲ್ಲನ್ನು ತೆಗೆಯಲು ಪ್ರಯತ್ನಿಸಿದಾಗ, ಅವನಿಗೆ ಸಾಧ್ಯವಾಗಲಿಲ್ಲ ಮತ್ತು ಆ ಕಲ್ಲಿಗೆ 'ಮಹಾಬಲ' (ಬಲವಾದ) ಎಂದು ಹೆಸರಿಸಲಾಯಿತು. ಆದ್ದರಿಂದ ಗೋಕರ್ಣದ ಮಹಾಬಲೇಶ್ವರ ದೇವಾಲಯ ಎಂದು ಹೆಸರು ಬಂದಿದೆ.

ಇದಲ್ಲದೆ, ಈ ದೇವಾಲಯವು ಮಹಾ ಗಣಪತಿ ದೇವಾಲಯ, ಚಂಡಿಕೇಶ್ವರ, ತಾಮಿರ ಗೌರಿ (ಪಾರ್ವತಿ ದೇಗುಲ), ಮತ್ತು ಆದಿ ಗೋಕರ್ಣೇಶ್ವರ, ದತ್ತಾತ್ರೇಯ ಮತ್ತು ಗೋಕರ್ಣನಾಯಕಿ ಮುಂತಾದ ಇತರ ದೇವಾಲಯಗಳಿಂದ ಆವೃತವಾಗಿದೆ.


ಮುಂದುವರೆಯುವುದು.........


Post a Comment

1 Comments

  1. ಪ್ರವಾಸ ಕಥನವನ್ನು ರಸವತ್ತಾಗಿ ವಿವರಿಸಿದ ತಮಗೆ ಮನಪೂರ್ವಕ ಧನ್ಯವಾದಗಳು.

    ReplyDelete