ಹದಗೆಟ್ಟ ಹೈವೇ ರಸ್ತೆ







*ಹದಗೆಟ್ಟ ಹೈವೇ ರಸ್ತೆ*

ಎಲ್ಲಿ ನೋಡಿದರೂ ಗುಂಡಿಗಳು
ಅಲ್ಲಿ ಚಲಿಸುವುದಕ್ಕೆ ಭಯ.
ಸ್ವಲ್ಪ ಯಾಮಾರಿದರೂ ನಮಗೆ
 ಅಪಾಯ ಕಟ್ಟಿಟ್ಟ ಬುತ್ತಿ.

ರಸ್ತೆಯಲಿ ಕಲ್ಲುಗಳು ಮೇಲೆ ಎದ್ದು
ನೋಡು ನೋಡುತ್ತಾ ಅದೆಷ್ಟು ಅಪಘಾತಗಳು
ಆದರೂ ಆಂಬುಲೆನ್ಸ್ ವ್ಯವಸ್ಥೆ,
ತುಂಬು ಗರ್ಭಿಣಿಯರಿಗೆ  ಅಲ್ಲೇ ಹೆರಿಗೆ.

ಪ್ರತಿ ನಿತ್ಯ ಓಡಾಡುವ ಮಕ್ಕಳಿಗೆ
ಸಮಸ್ಯೆಯೆ ಸಮಸ್ಯೆ ಏಕೆಂದರೆ ?
ಕಣ್ಣು ತಪ್ಪಿ ಯಾಮಾರಿದರೆ
ಗಾಯಗೊಳ್ಳುವುದು ಖಚಿತವಾಗಿತ್ತು.


ಬಸ್ಸು ಟ್ರಕ್ಸ್ ಗಳಲ್ಲಿ ಓಡಾಡುವುದಕ್ಕೆ ಭಯ,
ಒಂದು ದಿನ ಹೋದರೆ ನಾಲ್ಕು
 ದಿನ ಸುಧಾರಿಸಿಕೊಳ್ಳಬೇಕು 
ಇದೆ ಹದಗೆಟ್ಟ ಹೈವೇ ರಸ್ತೆ


~ನಿರಂಜನ್ ಎ ಸಿ ಬೇಲೂರು

Post a Comment

0 Comments