#ಪುಟ್ಟ_ಹೃದಯಕ್ಕೆ_ನೆರವಾಗು_ತಾಯಿ#
~~~~~~~~~~~~~~~~~~~~~~~
ಅನ್ನ ತಿನ್ನೋಕೆ ನಾನು ಪುಣ್ಯ ಪಡಬೇಕಾ ?
ಪುಣ್ಯ ಪಡೆದುಕೊಳ್ಳೋಕೆ ಎಷ್ಟು ಅಲೆಯಬೇಕು ದೇವಾ ?
ತುತ್ತು ಅನ್ನ ತಿನ್ನೋಕೆ,
ಜಾಗ ನೀಡುತಾಯಿ.
ಭಿಕ್ಷೆ ಬೇಡಿದರು, ಊರುಕೇರಿ
ಅಲೆದರು ಒಂದು ತುತ್ತು ಅನ್ನ ನೀಡುವವರಿಲ್ಲ.
ತಿಂದು ತೇಗಿ ಉಳಿದ ಆಹಾರವನ್ನು
ಹೊರ ಹಾಕುವರು ತಾಯಿ.
ಜಾತ್ರೆಯಾಗಲಿ ಮದುವೆಯಾಗಲಿ
ಬಡಿಸಿದ ಅನ್ನವ ಹೊರ ಹಾಕುವುದರ ಬದಲಿಗೆ
ಈ ಪುಟ್ಟ ಜೀವಕ್ಕೆ ನೀಡಿ
ಹಸಿವನ್ನು ನೀಗಿಸು ತಾಯಿ.
ಅತಿಯಾಗಿ ಅನ್ನ ಬಡಿಸಿಕೊಂಡು
ಎಡೆಯಲ್ಲಿ ಬಿಡುವವರು,
ಮನುಕುಲಕ್ಕೆ ಬುದ್ದಿ ಕಲಿಸು
ಈ ಪುಟ್ಟ ಹೃದಯಕ್ಕೆ ನೆರವಾಗು ತಾಯಿ.
~ನಿರಂಜನ್.ಎ.ಸಿ ಬೇಲೂರು
0 Comments