ಸರಳತೆ, ಶಿಸ್ತು, ವಿಚಾರವಾದದ ಸಾಕಾರಮೂರ್ತಿ ಬೇಲೂರು ಕೃಷ್ಣಮೂರ್ತಿ : ಸಾಹಿತಿ ಸೋಂಪುರ ಪ್ರಕಾಶ್,

 ಸರಳತೆ, ಶಿಸ್ತು, ವಿಚಾರವಾದದ ಸಾಕಾರಮೂರ್ತಿ ಬೇಲೂರು ಕೃಷ್ಣಮೂರ್ತಿ : ಸಾಹಿತಿ ಸೋಂಪುರ ಪ್ರಕಾಶ್,


ಬೇಲೂರು : ದಿವಂಗತ ಬೇಲೂರಿನ ಕೃಷ್ಣಮೂರ್ತಿಯವರು ನಾಡುಕಂಡ ಪ್ರಮುಖ ನಾಟಕಕಾರರು ಹಾಗೂ ಪ್ರಮುಖ ರಂಗಕರ್ಮಿಗಳಾಗಿದ್ದರು ಅಲ್ಲದೆ  ಸರಳತೆ, ಸಮಯ ಪ್ರಜ್ಞೆ ಹಾಗೂ ನೇರ ಮಾತಿನ ಶಿಸ್ತಿನ ವ್ಯಕ್ತಿತ್ವವನ್ನು ರೂಡಿಸಿಕೊಳ್ಳುವುದರ ಜೊತೆಗೆ ತನ್ನ ಸುತ್ತಲಿನವರಿಗೆ ಮಾರ್ಗದರ್ಶಕರಾಗಿ ಬಾಳಿದ ಹಿರಿಯ ಚೇತನ ಎಂದು ಸಾಹಿತಿ ಸೋಂಪುರ ಪ್ರಕಾಶ್ ರವರು ತಿಳಿಸಿದರು.ಅ

ವರು ಬೇಲೂರು ತಾಲ್ಲೂಕು  ಗ್ರಂಥಾಲಯದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು. ತಾಲ್ಲೂಕು ಘಟಕ ಬೇಲೂರು ಹಾಗೂ ಕವಿ ಕಾವ್ಯ ಸುಧೆ ಆಯೋಜಿಸಿದ ದಿ. ಬೇಲೂರು ಕೃಷ್ಣಮೂರ್ತಿ ಅವರ ನೆನಪಿನ ಸಂತಾಪ ಸೂಚಕ ಸಭೆ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ ಗುರುಗಳ ಆದರ್ಶಗಳನ್ನು ನಮ್ಮ ಜೀವನದಲ್ಲೂ ಅನುಸರಿಸುವ ಮೂಲಕ ಗೌರವ ಸಮರ್ಪಿಸಬೇಕಿದೆ ಎಂದು ನುಡಿದರು.


ಉಪನ್ಯಾಸಕರಾದ ಆರ್ ಎಸ್ ಮಹೇಶ್ ರವರು ಮಾತನಾಡಿ ತಮ್ಮ ಗುರುಗಳಾದ ದಿ. ಬೇಲೂರು ಕೃಷ್ಣಮೂರ್ತಿ ರವರ ಹಾಸ್ಯಪ್ರಜ್ಞೆಯನ್ನು ಮೆಲುಕು ಹಾಕುತ್ತಾ ಅವರ ಕರ್ತವ್ಯ ನಿಷ್ಠೆ, ಸಾಹಿತ್ಯ ಸಾಧನೆಯ ಬಗ್ಗೆ ವಿವರಿಸಿ ಅವರ ಸಾವಿಗೆ ಸಂತಾಪ ಸೂಚಿಸಿದರು.

ಬೇಲೂರು ಕೃಷ್ಣಮೂರ್ತಿ ಅವರಲ್ಲಿ ಸಾಹಿತ್ಯದ ಹೊರತಾಗಿಯೂ ಸಹ  ನಾವು ಶ್ಲಾಘಿಸುವ ಮೇರು ವ್ಯಕ್ತಿತ್ವಗಳೆಂದರೆ ನೆನಪಿನ ಶಕ್ತಿ, ವಿಷಯ ಪಾಂಡಿತ್ಯ,ಅವರಲ್ಲಿದ್ದ ಸರಳತೆ , ಸಮಾನತೆಯ ಭಾವ ಮತ್ತು ಶಿಸ್ತು. ಇವುಗಳು ಅತ್ಯಂತ ಅನುಕರಣೀಯವಾಗಿದ್ದವು ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾರುತಿ ದೊಡ್ಡಕೋಡಿಹಳ್ಳಿ ಅಭಿಪ್ರಾಯ ಪಟ್ಟರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾ ಸಂಚಾಲಕ ನಿರಂಜನ್ ಎ ಸಿ ಬೇಲೂರು ಮಾತನಾಡಿ  ಯುವ ಮನಸ್ಸುಗಳಿಗೆ ಸದಾ ಬೆಂಬಲ ನೀಡುತ್ತಿದಂತಹ ವ್ಯಕ್ತಿ, ಹಾಗೂ ಸಾಕಷ್ಟು ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘಟನೆಗಳಿಗೆ ಬೆನ್ನೆಲುಬಾಗಿ ನಿಂತು ಸದಾ ಮಾರ್ಗದರ್ಶನ ನೀಡುತಿದ್ದರು ಎಂದು ಅವರನ್ನ ಸ್ಮರಿಸಿದರು.


ಕಾರ್ಯಕ್ರಮದಲ್ಲಿ  ಸಾಹಿತಿಗಳಾದ ಬೊಮ್ಮಡಿಹಳ್ಳಿ ಕುಮಾರಸ್ವಾಮಿ, ಕಸಾಪ ಮಾಜಿ ಆದ್ಯಕ್ಷರಾದ ಬಿ. ಎನ್ ಆನಂದ್, ವೇದಿಕೆಯ ಜಿಲ್ಲಾ ಸಂಚಾಲಕ ನಿರಂಜನ್ ಎ ಸಿ ಬೇಲೂರು,  ಮಾ.ನ.ಮಂಜೇಗೌಡ, ಶ್ರೀಮತಿ ಸೌಭಾಗ್ಯ ಅಂತೋಣಿ, ದೈಹಿಕ ಶಿಕ್ಷಕರಾದ ನಂದೀಶ್,  ಲೈಬ್ರೇರಿಯನ್ ಸೋಮಶೇಖರ್,  ಶಿಕ್ಷಕರಾದ ಶಿವಪ್ಪ ,ನಾಗರಾಜು  ಮುಂತಾದವರು ನುಡಿನಮನ ಸಲ್ಲಿಸಿದರು. ಚಂದ್ರ ಕಿರಣ್ ಗುಜ್ಜರ್, ಸಮಾಜ ಸೇವಕ ಸಂಪತ್, ನಂಜುಂಡಯ್ಯ, ಗುರುರಾಜು, ಅಂತೋಣಿ ಸ್ವಾಮಿ ಮುಂತಾದವರು ಭಾಗವಹಿಸಿದ್ದರು . ಕವಯಿತ್ರಿ  ಪಲ್ಲವಿ ಬೇಲೂರು ನಿರೂಪಿಸಿದರು.

Post a Comment

0 Comments