ಅಳತೆ ತಪ್ಪಿದರೆ

ಅಳತೆ ತಪ್ಪಿದ ಮಾತ್ರಕ್ಕೆ
ಧರಿಸಿದ ವಸ್ತ್ರ ಬದಲಾಗಲು ಸಾಧ್ಯವಿಲ್ಲ,
ಆದರೆ ಅದನ್ನೇ ಮತ್ತೆ ಹಿಡಿದು ಅಳತೆ ಮಾಡಿ 
ಹೊಲಿದು ಬದಲಾವಣೆ ಮಾಡಬಹುದಲ್ಲವೇ?.

ಜೀವನದಲ್ಲಿಯೇ ಎಡಕು ತೊಡಕುಗಳ ಮುಂದೆ
ನಾವು ನಮ್ಮವರೆಂಬ ಕಾಳಜಿಯ ಮರೆತು,
ದಿನ ನಿತ್ಯ ಕಿತ್ತಾಡಿ, ಒಂದಾಗುವ ಸಂಧರ್ಭದಲ್ಲಿಯೂ 
ಅಳತೆ ತಪ್ಪಿದಾಗ ಬದಲಾವಣೆ ನಿಶ್ಚಿತವಾಗಿರುತ್ತದೆ ಅಲ್ಲವೇ ?.


ಬೇಡ ಬೇಡವೆಂದರು ಜಂಗಮವಾಣಿಯ ಬಳಸಿ.
ಅದರಲ್ಲಿಯೂ ಸಮಾಜಿಕ ಜಾಲತಾಣಗಳ ಮಧ್ಯೆ ಸಿಲುಕಿ,
Like comment ಗಳು ಬರಲಿಲ್ಲವೆಂದರೆ,
ಜೀವನದ ಅಳತೆಗೆ ಕೊನೆ ಹುಸಿರು ಇಡುತ್ತಿಲ್ಲವೇ? .

ಬಾಲ್ಯದ ನೆನಪುಗಳಲ್ಲಿ ಕಂಡ ಕನಸುಗಳು ಮಧ್ಯೆ 
ನುಚ್ಚು ನೀರಾಗದೆ, ಸಾಗುತಿಲ್ಲವೇ ನನ್ನಯ ಬದುಕು,
ನಾನು ಹಾಕಿಕೊಂಡ  ಅಳತೆ ತಪ್ಪಿದರೆ ಅಂದು 
ನಾನ್ಯಾಕೆ ಹೀಗಿರುತ್ತಿದ್ದೆ ಇಂದು ಅಲ್ಲವೇ?



*©ನಿರಂಜನ್ ಎ ಸಿ ಬೇಲೂರು*

Post a Comment

0 Comments