ಮನುಷ್ಯ ಬದುಕಲು ಪರಿಸರದ ಮೇಲೆ ಕಾಳಜಿ ವಹಿಸಲೇಬೇಕಿದೆ !
~ ನಿರಂಜನ್ ಎ.ಸಿ ಬೇಲೂರು
ಲೇಖಕ.
ನಿಜ ಮಾನವನು ತಾನು ಬದುಕಿ ಬಾಳಲು ಪ್ರಕೃತಿ
ಯಲ್ಲಿ ದೊರೆಯುವ ಗಾಳಿ, ನೀರು, ಮಣ್ಣು, ಕನಿಜಗಳು, ಗಿಡ ಮರಗಳು, ಪ್ರಾಣಿಪಕ್ಶಿಗಳು, ಹೀಗೆ ಹಲವಾರು ಸಂಪನ್ಮೂಲಗಳ ಮೇಲೆ ಅವಲಂಬಿತನಾಗಿದ್ದಾನೆ.
ಆದರೆ ಇತ್ತೀಚೆಗೆ ನಗರಗಳ ಅಭಿವೃದ್ಧಿಗಾಗಿ ಮರಗಿಡಗಳನ್ನ ಕಡಿಯುತ್ತಿರುವುದು ಎಷ್ಟು ಸರಿ ಎಂಬುದನ್ನು ಕೂಡ ನಾವು ಅರಿಯಬೇಕಿದೆ.
ಹೀಗಿರುವಾಗ ನಾವೆಲ್ಲರೂ ನಮ್ಮ ಪರಿಸರ ಮೇಲೆ ಕಾಳಜಿ ಅವಶ್ಯಕವಾಗಿದೆ , ಅಭಿವೃದ್ಧಿಯೊಂದಿಗೆ ಗಿಡ - ಮರಗಳನ್ನು ಹೆಚ್ಚು ಹೆಚ್ಚು ಬೆಳಸುತ್ತಾ ಹೋಗುವುದು ಉತ್ತಮ , ಇದರಿಂದ ಆರೋಗ್ಯ - ಉತ್ತಮ ಗಾಳಿ ಸುಖ ಜೀವನವನ್ನು ನಡೆಸುವುದಕ್ಕೆ ಅನುಕೂಲವಾಗುತ್ತದೆ.
REFUSE (ನಿರಾಕರಣೆ)
REDUCE (ಮಿತಬಳಕೆ) , REUSE (ಮರುಬಳಕೆ) , REPURPOSE (ಬದಲಿ ಉದ್ದೇಶ) , RECYCLE (ಮರುಸಂಸ್ಕರಣೆ) ಈ ಐದು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕಿದೆ.
ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ನಾವು ಪರಿಸರವನ್ನು ಸಂರಕ್ಷಿಸಿದರೆ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ನೀಡಲು ಸಾಧ್ಯ.
ಮನೆಗೊಂದು ಮರ ಊರಿಗೊಂದು ವನ ಎಂಬಂತೆ ಪ್ರತಿಯೊಬ್ಬರೂ ಸಹ ತಮ್ಮ ಮನೆಯ , ಶಾಲಾ ಕಾಲೇಜು ಆವಣಗಳಲ್ಲಿ , ಕಚೇರಿಗಳ ಸುತ್ತಮುತ್ತ , ಗಿಡ ನೆಡುವ ಮೂಲಕ ಈ ನಾಡನ್ನು ಕಾಪಾಡುವಂತ ಕೆಲಸ ಮಾಡಬೇಕಿದೆ ,
ಆದ್ದರಿಂದ ವಿಶ್ವ ಪರಿಸರ ದಿನದಂದು ಮಾತ್ರವಲ್ಲದೆ ಪ್ರತಿದಿನವೂ ಪರಿಸರ ಸಂರಕ್ಷಣೆಗೆ ಸಂಕಲ್ಪ ಮಾಡೋಣ.
ನಗರಗಳಲ್ಲಿ ನಾವು ಕಂಡಂತೆ ಅತಿಹೆಚ್ಚು ಪೆಟ್ರೋಲ್ - ಡೀಸೆಲ್ ವಾಹನಗಳೇ ಹೆಚ್ಚಾಗಿ ಸಂಚರಿಸುತ್ತಿವೆ , ಇದರ ಬದಲಿಗೆ ಎಲೆಕ್ಟ್ರಿಕಲ್ ವಾಹನಗಳನ್ನು ಬಳಸುವುದು ಅಥವಾ ಮಾಲಿನ್ಯವನ್ನು ಕಡಿಮೆ ಮಾಡಲು ಪ್ರತಿನಿತ್ಯ ಸಾರ್ವಜನಿಕ ವಾಹನಗಳನ್ನು ಬಳಸುವುದು ಉತ್ತಮ ಎನ್ನಬಹುದು.
ಆಚರಣೆಯ ಇತಿಹಾಸ !
ವಿಶ್ವ ಪರಿಸರ ದಿನವನ್ನು 1974 ರಲ್ಲಿ ವಿಶ್ವಸಂಸ್ಥೆಯ ಅನುಮೋದನೆಯೊಂದಿಗೆ ಆರಂಭಿಸಲಾಯಿತು. ಈ ಕುರಿತು 1972 ರಲ್ಲಿಯೇ ಚರ್ಚೆಗಳು ಆರಂಭವಾಗಿತ್ತು. ಆದರೆ ಎರಡು ವರ್ಷಗಳ ಕಾಲ ಈ ಚರ್ಚೆ ನಡೆಸಿ, 1974 ಜೂನ್ 5 ರಂದು ಮೊದಲು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಗಿಡ ನೆಡುವುದರ ಮೂಲಕ , ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ.

0 Comments